19 December, 2015

ಓ ಹೆಣ್ಣೇ ನಿನಗೆ ನಮನ...


ಪ್ರೀತಿಯಲಿ ಎಲ್ಲವು ಸಹಜ ಇಲ್ಲಿ
ತ್ಯಾಗವೇ ಮೆರೆಯುವುದು ಓ ಹೆಣ್ಣೇ ನಿನ್ನ ಬಾಳಲಿ
ಮಮತೆಗೆ ಉಸಿರು ನೀನು
ನಿಸ್ವಾರ್ಥಕೂ ನಿನ್ನದೇ ಹೆಸರು ಈ ಸೃಷ್ಟಿಯಲಿ.

ವನವಾಸ  ನಿನಗೆ ಖಾಯಮ್ಮು
ನೀ ರಾಮನ ಸೀತೆಯಾದರೆ,
ಸಹನೆಯಲಿ ನೀನು ಭೂಮಿಯಾದವಳು
ಬಚ್ಚಿಟ್ಟೆ ನೋವುಗಳ ತನ್ನವರ ಹಿತಕಾಯಲು.

ವಿರಹದ ನೂರು ನೋವು ಗ್ಯಾರಂಟಿ
ನೀನು ಮುರಳಿಯ ರಾಧೆಯಾದರೂ,
ಪ್ರೀತಿಯನು ಮೊಗೆ ಮೊಗೆದು ಕೊಡುವೆ
ನಾಲ್ಕು ಗೋಡೆಗಳ ನಡುವೆ ನೀ ನಿಂತರೂ.

ಕಲ್ಲಾಗಲೇಬೇಕು ನಿನ್ನ ಯ ಮನಸು
ನೀನು ಗೌತಮನ ಅಹಲ್ಯೆಯಾಗುವುದಾದರೆ,
ಸೃಷ್ಟಿಯ ಸೌಂದರ್ಯ ತನ್ನೊಳಗೆ ಬಚ್ಚಿಟ್ಟೆ
ಪ್ರಕೃತಿಯು ನೀನಾದೆ ಜಗ ಕಾಯಲು.

ಅವಮಾನಗಳ ಸಹಿಸಲೇಬೇಕು ನೀನು
ಧರ್ಮಜನ ಅರ್ಧಾಂಗಿಯಾದರೂ,
ನೋವು ಅವಮಾನಗಳ ನೀ ಮೆಟ್ಟಿ ನಿಂತೆ
ಈ ಜಗದ ಕಣ್ಣಾಗಲು...

No comments:

Post a Comment