11 January, 2016

ಪ್ರೀತಿಯ ಚಿತ್ತಾರ...


ಬದುಕ ಬಯಲಲ್ಲಿ ಚೆಲ್ಲಿದೆ ಪ್ರೀತಿ ಬೆಳ್ಳಿಬೆಳದಿಂಗಳು
ಅರಳಿವೆ ಮನದ ಅಂಗಳದಿ ನೂರಾರು ಕನಸುಗಳು,
ಬಯಕೆ ನೂರಿಲ್ಲಿ ಮನಸಿಗೆ ಒಲವಾ ಪಯಣದಲಿ
ಭಾವಗಳ ಬಣ್ಣದಲಿ ಮನಸು ಹಾಕಿದೆ ರಂಗೊಲಿ.

ಬದುಕ ಕಡಲಲ್ಲಿ ದೊರೆತಿದೆ ಒಲವ ಮುತ್ತೊಂದು
ಬಚ್ಚಿಟ್ಟಿದೆ ಮನಸಿಲ್ಲಿ ಎದೆಯಾಳದ ಗುಟ್ಟಂತೆ,
ಶುರುವಾಗಿದೆ ಎದೆಯೊಳಗೆ ಒಲವ ಕಚಗುಳಿಯೂ
ಪ್ರೀತಿ ಒಳಗೊಳಗೆ ಇಲ್ಲಿ ಬದುಕೇ ಪ್ರೀತಿ ಎದೆಯೊಳಗೆ.

ಮನಸಿಲ್ಲಿ ನಿರ್ಮಲ ಹರಿಯುವ ತೊರೆಯಂತೆ
ಮೂಡಿವೆ ಎಲ್ಲೆಲ್ಲೋ ಮನದಲಿ ಪ್ರೀತಿಯ ಬಿಂಬಗಳೇ,
ಮನಸ ನದಿಯೊಳಗೂ ನೂರಾರು ಕಲರವವೇ
ಪ್ರತಿ ಉಸಿರಿನ ಜೊತೆಯಲ್ಲಿ ಮೂಡಿದೆ ಒಲವ ಸಂಗೀತ.

ಮನಸೊಳಗೆ ಮನಸಂತೆ ಮನಸಿಗೂ ಒಂದು ಜೊತೆಯಂತೆ
ಕನಸೊಳಗೆ ಕನಸಂತೆ ಇಲ್ಲಿ ಕನಸಿಗೂ ಒಂದು ಜೊತೆಯಂತೆ,
ಭೂಮಿ ಬಾನನು ಬೆಸೆದಂತೆ ಇಲ್ಲಿ ಪ್ರೀತಿಯ ಚಿತ್ತಾರ
ಒಲವ ಕನಸಲ್ಲಿ ಮನಸಾಗಿದೆ ಭಾವನೆಗಳ ಭಂಡಾರ.

No comments:

Post a Comment