28 February, 2016

ಪ್ರಾಣಸಖಿ...


ಚಂದಿರನ ಕರೆದು ತರುವೆ ಓ ನನ್ನ ಚಂದ್ರಮುಖಿ
ಇಂದ್ರನ ಕಟ್ಟಿ ತರುವೆ ಓ ಚೆಲುವೆ ಕಮಲಮುಖಿ
ತಾರೆಗಳ ತೊಟ್ಟಿಲಲ್ಲಿ ನಾ ನಿನ್ನ ತೂಗುವೆ ಬಾರೇ ಸಖಿ.

ನವಿಲುಗಳ ಕೂಗಿ ಕರೆವೆ ಓ ನನ್ನ ಪ್ರೀಯ ಸಖಿ
ಕಾಜಾಣ ಕೋಗಿಲೆಗಳ ಕರೆವೆ ಸ್ವರಗಳ ಕಲಿಸೋಕೆ
ಹಂಸಗಳ ಕರೆದು ತರುವೆ ನಡಿಗೇನಾ ಕಲಿಸೋಕೆ.

ಮೇಘಗಳ ಒಲಿಸಿ ಬರುವೆ ಓ ನನ್ನ ಪ್ರಾಣ ಸಖಿ
ಮುಂಗಾರು ಮಳೆಯ ಕರೆದು ತರುವೆ ನಿನ್ನ ಪಾದ ತೊಳೆಯೋಕೆ
ಮಿಂಚುಗಳ ಕೂಗಿ ಕರೆವೆ ನಿನ್ನ ದಾರಿ ಬೆಳಗೋಕೆ.

ಸುಮಗಳ ಬಾಚಿ ತರುವೆ ನಿನ್ನ ಮುಡಿಗೆ ಮುಡಿಸೋಕೆ
ಇಬ್ಬನಿಯ ಕೂಗಿ ಕರೆವೆ ನಿನ್ನ ಮುಖದಿ ಮಿನುಗೋಕೆ
ದುಂಬಿಗಳ ಜೊತೆಗೆ ಬರುವೆ ಓ ನನ್ನ ಪ್ರೇಮ ಸಖಿ.

ತಂಗಾಳಿಯ ಕರೆದು ತರುವೆ ಚಾಮರವ ಬೀಸೋಕೆ
ನೇಸರನ ಓಲೈಸಿ ಬರುವೆ ಎಳೆ ಬಿಸಿಲು ನೀಡೋಕೆ
ಬಾರೆ ನೀ ಪ್ರಾಣ ಸಖಿ ನನ್ನೊಲವ ಊರಿಗೆ.

No comments:

Post a Comment