06 November, 2016

ತೊಳಲಾಟ...


ಕನಸುಗಳು ಕರಗಿವೆ
ನೆನಪುಗಳ ಹುಡುಕುತಾ,
ಮನಸಿಲ್ಲಿ ಮೌನವೂ
ನೂರೊಂದು ತೊಳಲಾಟದಿ...

ಮನಸಿಂದೂ ಮರೆತಿದೆ
ಕನಸಿನಾ ಲೋಕವಾ,
ಕದವಿಲ್ಲಿ ಮುಚ್ಚಿದೆ
ಭಾವಗಳ ಮಿಲನಕೆ...

ಭಾವವೂ ಮೈನೆರೆದಿದೆ
ಒಂಟಿತನದಾ ನೋವಲಿ,
ಆಸೆಗಳು ದೂರಾಗಿವೆ
ನಾಳೆಗಳ ಹಂಗಿಲ್ಲದೇ...

ನಾಳೆಗೂ ಬೇಡವಾಗಿದೆ
ನಿನ್ನೆಗಳ ಕೈತುತ್ತದು,
ನಗುವಿಲ್ಲಿ ಮರೆತಿದೆ
ಕಾರಣ ಇಲ್ಲದೇ...

ಕಾಲದಾ ಓಟಕೆ
ಬದುಕಿಲ್ಲಿ ಮೈಮರೆತಿದೆ,
ಬದಲಾದ ಕಾಲವೂ
ಬದುಕನ್ನೇ ಮರೆತಿದೆ...

ಮುಳುವಾಗಿದೆ ಯಾತನೆ
ಹೃದಯದಾ ಹಾಡಿಗೆ,
ಮಿಡಿಯುವಾ ಹೃದಯವೂ
ಮೂಕವಾಗಿ ನಿಂತಿದೆ...

No comments:

Post a Comment