13 November, 2016

ನನ್ನೊಲವೇ...

ನಿನ್ನ ಒಲವಿನ ಮುಂದೆ
ನಾನೆಂದೂ ಪ್ರೇಮಖೈದಿಯೂ,
ನಿನ್ನಾ ನಗುವಿನ ರೀತಿ
ನನಗೆಂದೂ ಆನಂದವೂ...

ಓ ಒಲವೇ ನಿನ್ನಯ ರೀತಿ
ಅದು ಎಷ್ಟು ಸುಂದರ,
ನಾನೆಂದು ನಿನಗಾಗಿ ಇಲ್ಲಿ
ಬೆಳದಿಂಗಳ ಚಂದಿರ...

ಮರೆಯುವೆ ನೂರು ನೋವ
ನಿನ್ನಾ ಪ್ರೀತಿಯ ರೀತಿಯಲಿ,
ಅಳುವೇ ಬರದು ಮುಂದೆ
ಈ ಜೀವನ ಜೋಕಾಲಿಯಲಿ...

ನೀನು ಇರಲು ಜೊತೆಗೆ
ಪ್ರತಿ ಕ್ಷಣವೂ ನನಗದು ಹಬ್ಬ,
ನಗುತಾ ಇರಲು ನೀನು
ಜೀವನವೆನಗೆ ನಗೆಹಬ್ಬ...

ಜೊತೆಗೆ ನೀನಿಡುವಾ ಹೆಜ್ಜೆ
ನನ್ನೆದೆಗೆ ಒಲವಾ ಕಚಗುಳಿಯೂ,
ಪ್ರತಿ ಹೆಜ್ಜೆಗೂ ಕಾವಲು ನಾನು
ನಿನ್ನೊಲವಿಗೆ ಸೇವಕನಾಗಿ...

ಚಂದದ ತೋರಣ ನೀನು
ಹೊಸ ಕನಸುಗಳ ಸ್ವಾಗತಕೆ,
ಓರಣಗೊಳಿಸು ಈಗ
ಈ ಬದುಕಿನ ರಥವನ್ನು...

No comments:

Post a Comment