ಮಳೆಯಾಗಬೇಕು ನೆನಪೇ ನೀನು
ಈ ಮನದ ಬಾಂದಳದಿ,
ತುಸು ಹಸನಾಗಲಿ ಇಲ್ಲಿ
ಬದುಕ ಕನವರಿಕೆ...
ಇಳೆಯಾಗಬೇಕು ಬದುಕೇ ಇಲ್ಲಿ
ಕನಸ ಇಳುವರಿಗೆ,
ಮೃದುವಾಗಲಿ ಹೃದಯ
ಭಾವ ಸಂಭ್ರಮಕೆ...
ಮರವಾಗಬೇಕು ಮನಸೇ
ಬದುಕ ಬನದೊಳಗೆ,
ಗೂಡ ಕಟ್ಟಿ ನಲಿಯಲಿ ಅಲ್ಲಿ
ಪ್ರೀತಿ ಹಕ್ಕಿಗಳೆಲ್ಲಾ...
ಕಲ್ಲಾಗಲಿ ಹೃದಯ
ಕಷ್ಟಗಳ ಮಳೆ ಸುರಿಯೆ,
ಅನುಮಾನದ ಹುತ್ತ ಮೊಳಕೆಯೊಡೆಯದಿರಲಿ
ಬದುಕಿನ ಪಯಣದ ಸುತ್ತಾ...
ಹದವಾಗಲಿ ಬದುಕು
ಒಲವ ಸಮ್ಮಿಲನಕೆ,
ಹಿತವಾಗಿರಲಿ ಪಯಣ
ಇಂದು ನಾಳೆಗಳಲಿ...
ಈ ಮನದ ಬಾಂದಳದಿ,
ತುಸು ಹಸನಾಗಲಿ ಇಲ್ಲಿ
ಬದುಕ ಕನವರಿಕೆ...
ಇಳೆಯಾಗಬೇಕು ಬದುಕೇ ಇಲ್ಲಿ
ಕನಸ ಇಳುವರಿಗೆ,
ಮೃದುವಾಗಲಿ ಹೃದಯ
ಭಾವ ಸಂಭ್ರಮಕೆ...
ಮರವಾಗಬೇಕು ಮನಸೇ
ಬದುಕ ಬನದೊಳಗೆ,
ಗೂಡ ಕಟ್ಟಿ ನಲಿಯಲಿ ಅಲ್ಲಿ
ಪ್ರೀತಿ ಹಕ್ಕಿಗಳೆಲ್ಲಾ...
ಕಲ್ಲಾಗಲಿ ಹೃದಯ
ಕಷ್ಟಗಳ ಮಳೆ ಸುರಿಯೆ,
ಅನುಮಾನದ ಹುತ್ತ ಮೊಳಕೆಯೊಡೆಯದಿರಲಿ
ಬದುಕಿನ ಪಯಣದ ಸುತ್ತಾ...
ಹದವಾಗಲಿ ಬದುಕು
ಒಲವ ಸಮ್ಮಿಲನಕೆ,
ಹಿತವಾಗಿರಲಿ ಪಯಣ
ಇಂದು ನಾಳೆಗಳಲಿ...
No comments:
Post a Comment