20 May, 2017

ಪಯಣ...

ಬದುಕೋಕೆ ದಾರಿ ನೂರಾರಿದೆ
ಕಾರಣವು ಮಾತ್ರ ಒಂದೇ ಇದೆ
ಒಲವೆಂಬ ಹೆಸರು ಅದಕಿಲ್ಲಿದೆ...

ನಡೆಯೋ ಹಾದಿಯಲಿ ಆಸೆ ನೂರಿದೆ
ಬವಣೆ ನೂರಿದ್ದರೂ ಭರವಸೆಯೊಂದಿದೆ
ಪ್ರತಿಯೊಂದು ಆಸೆಗೂ ಕನಸ ನೆರಳಿಲ್ಲಿದೆ...

ನಲಿವಿಗೂ ಸಮಪಾಲು ಬದುಕಲ್ಲಿದೆ
ಕಣ್ಣೀರ ಹನಿಯಿಲ್ಲಿ ಕಥೆ ಹೇಳಿದೆ
ತುಟಿಯಂಚಿನ ನಗು ಮಾತ್ರ ಮೈ ಮರೆಸಿದೆ...

ಎಡವಿ ಬೀಳೋಕೆ ಕಾರಣವು ನೂರಾರಿದೆ
ಎದ್ದು ನಿಲ್ಲೋಕೆ ನೆರವೊಂದು ಬೇಕಾಗಿದೆ
ನಂಬಿಕೆಯ ಹೆಸರು ಅದಕ್ಕಿಲ್ಲಿದೆ...

ಬಾಳಲ್ಲಿ ಗುರಿಯೊಂದು ಬೇಕಾಗಿದೆ
ಗುರಿ ಸೇರೋಕೆ ಛಲವೊಂದೆ ಸಾಕಾಗಿದೆ
ಮನಸಿಲ್ಲಿ ಬದುಕಿಗೆ ಗುರುವಾಗಿದೆ...








No comments:

Post a Comment