30 April, 2017

ಕೊಳೆಯ ತೊಳೆಯಬೇಕು...

ಕೊಳೆಯ ತೊಳೆಯಬೇಕು
ಪಾಪದ ಕಲೆಯ ತೊಳೆಯಬೇಕು,
ಜ್ಞಾನದ ಸ್ನಾನ ಮಾಡಬೇಕು
ಮನಸಿನ ಕೊಳೆಯ ತೆಗೆಯಬೇಕು...

ಪೂಜೆ ಮಾಡಬೇಕು ಗುರು ಹಿರಿಯರ
ಪಾದ ಪೂಜೆ ಮಾಡಬೇಕು,
ಕೊಳೆಯ ತೊಳೆಯಬೇಕು
ನಾನು ನನ್ನದೆಂಬ ಅಹಂಕಾರವ ಬಿಡಬೇಕು...

ಸೇವೆ ಮಾಡಬೇಕು ತಂದೆ ತಾಯಿಯರ
ನಿತ್ಯ ಸೇವೆ ಮಾಡಬೇಕು,
ಕೊಳೆಯ ತೊಳೆಯಬೇಕು
ಬದುಕಿನ ಋಣವ ಕಡಿಮೆ ಮಾಡಿಕೊಳ್ಳಬೇಕು...

ಆಸೆಯ ಬಿಡಬೇಕು ಬದುಕಲಿ
ದುರಾಸೆಯ ಬಿಟ್ಟು ಬದುಕಬೇಕು,
ಕೊಳೆಯ ತೊಳೆಯಬೇಕು
ಬದುಕಿನ ಭಾರ ಕಡಿಮೆ ಮಾಡಬೇಕು...

ಪ್ರೀತಿ ಬೆಳೆಸಬೇಕು ಬದುಕಲಿ
ಶಾಂತಿ ಹರಡಬೇಕು,
ದ್ವೇಷ ಕಳೆಯಬೇಕು ಜಗದಲಿ
ಅಜ್ಞಾನದ ಅಂಧಕಾರ ತೊಲಗಬೇಕು...


No comments:

Post a Comment