ನಗುವಾ ಗುಲಾಬಿ ನಾನು
ನಗುವೇ ಬದುಕು ನನ್ನದೂ,
ನಗುವ ಕಸಿಯೋಕು ಮೊದಲು
ಈ ಮುಳ್ಳುಗಳ ರುಚಿಯನು ನೋಡು...
ಪ್ರೀತಿಯೇ ಬದುಕು ನನ್ನದೂ
ಪ್ರೀತಿಯಲಿ ನಾ ಪ್ರೇಮಾಚಾರಿ,
ಮೋಸದಲಿ ಮನಸ ಗೆಲ್ಲಲಾರೆ
ನೀನಾದರೂ ವಾಮಾಚಾರಿ...
ನಂಬಿಕೆಯೇ ಬದುಕೂ ನನ್ನದು
ನನಗದುವೇ ಅಮೃತವೂ,
ಬೆರೆಸಲಾರೆ ನೀ ವಿಷವಾ
ಸಂಬಂಧಗಳ ಈ ಪಾತ್ರೆಯೊಳಗೆ...
ಧರ್ಮವೇ ಉಸಿರೂ ನನಗೇ
ಸತ್ಯವೇ ನಾ ನಡೆವ ಹಾದಿ,
ಕೆಣಕಿ ಬಲಿಯಾಗುವೆಯೇತಕೆ
ಸಾಮ ಧಾನ ದಂಡ ಭೇದಕೆ...
ಬದುಕಿದು ಆ ಶಕ್ತಿಯ ಕೊಡುಗೆ
ನಾ ಕೋಟಿ ಹರಕೆಯಾ ಫಲ,
ಮಣಿಸಲಾರೆ ಓ ಕ್ಷುದ್ರಶಕ್ತಿಯೇ ನೀ
ಸತ್ಯದಾ ಬೆಳಕಿರುವವರೆಗೇ...
ನಗುವೇ ಬದುಕು ನನ್ನದೂ,
ನಗುವ ಕಸಿಯೋಕು ಮೊದಲು
ಈ ಮುಳ್ಳುಗಳ ರುಚಿಯನು ನೋಡು...
ಪ್ರೀತಿಯೇ ಬದುಕು ನನ್ನದೂ
ಪ್ರೀತಿಯಲಿ ನಾ ಪ್ರೇಮಾಚಾರಿ,
ಮೋಸದಲಿ ಮನಸ ಗೆಲ್ಲಲಾರೆ
ನೀನಾದರೂ ವಾಮಾಚಾರಿ...
ನಂಬಿಕೆಯೇ ಬದುಕೂ ನನ್ನದು
ನನಗದುವೇ ಅಮೃತವೂ,
ಬೆರೆಸಲಾರೆ ನೀ ವಿಷವಾ
ಸಂಬಂಧಗಳ ಈ ಪಾತ್ರೆಯೊಳಗೆ...
ಧರ್ಮವೇ ಉಸಿರೂ ನನಗೇ
ಸತ್ಯವೇ ನಾ ನಡೆವ ಹಾದಿ,
ಕೆಣಕಿ ಬಲಿಯಾಗುವೆಯೇತಕೆ
ಸಾಮ ಧಾನ ದಂಡ ಭೇದಕೆ...
ಬದುಕಿದು ಆ ಶಕ್ತಿಯ ಕೊಡುಗೆ
ನಾ ಕೋಟಿ ಹರಕೆಯಾ ಫಲ,
ಮಣಿಸಲಾರೆ ಓ ಕ್ಷುದ್ರಶಕ್ತಿಯೇ ನೀ
ಸತ್ಯದಾ ಬೆಳಕಿರುವವರೆಗೇ...
No comments:
Post a Comment