15 July, 2018

ಬಯಲುದಾರಿ...

ಬದುಕಿನ ಬಯಲೊಳು
ಬೆತ್ತಲಾಗಬೇಡವೆ ಮನಸೇ,
ಸಿಹಿಯಾದರೆ ನೀನು ನುಂಗಿ ಬಿಟ್ಟಾರು
ಕಹಿಯಾದರೆ ನಿನ್ನ ಉಗುಳಿಯಾರು...

ಮನಸಿನ ಆಗಸದಿ
ಕನಸನು ತೆರೆದಿಡಬೇಡವೇ ಬದುಕೇ,
ಕಣ್ಣ್ ದೃಷ್ಟಿಯಾದೀತು ಕನಸೀಗೆ
ಕರಗಿ ಹೋದಾವು ನಾಳೆಗಳ ಖುಷಿಯೂ...

ಮುಖವಾಡಗಳ ಬದುಕೇ
ಬಣ್ಣಗಳ ಹಚ್ಚದಿರು ನೀನು,
ನಾಟಕವಾದೀತು ಬದುಕು
ಜಗದ ನಾಟಕ ಶಾಲೆಯಲಿ...

ಉರಿವ ಜ್ವಾಲೆಯಾದರೂ ಬದುಕು
ಸುಡುವ ಕೆಂಡವಾಗಬೇಡ ಮನವೇ,
ಬೂದಿಯಾದರೂ ಸರಿಯೇ
ಫಲವತ್ತಾಗಿರಲಿ ನೀ ನಡೆದ ಹಾದಿ...












No comments:

Post a Comment