25 July, 2018

ಫಕೀರ...

ಬದುಕೆಂಬ ಬೃಂದಾವನದಲ್ಲಿ
ನಾನು ಒಬ್ಬ ಫಕೀರ,
ನೋವು ನಲಿವುಗಳೆಷ್ಟೇ ಇರಲಿ
ನಗುವೊಂದೇ ಅದಕ್ಕೆ ಪರಿಹಾರ...

ಹಂಗೇನೂ ಇಲ್ಲಾ ಇಲ್ಲಿ
ಸಂಬಂಧಗಳ ಸುಳಿಯೊಳಗೆ,
ಸ್ನೇಹಾನೇ ಎಲ್ಲಾ ಇಲ್ಲಿ
ಈ ಫಕೀರನ ಮನದ ಜೋಳಿಗೆಯೊಳಗೆ...

ಅಹಂಕಾರವು ಚಪ್ಪಲಿ ಇವಗೆ
ಈ ಜಗದ ಸುತ್ತಾಟಕ್ಕೆ,
ಧರ್ಮವೇ ಕಿರೀಟವು ಇಲ್ಲಿ
ಇವ ನುಡಿಯೋ ನ್ಯಾಯಕ್ಕೆ...

ನಂಬಿಕೆಯೇ ಮೂಲಮಂತ್ರ
ಬದುಕಿನಾ ಈ ಬೃಂದಾವನದಿ,
ಪ್ರೀತಿನೇ ಅಮೃತ ಇಲ್ಲಿ
ಪ್ರತಿ ನೋವನು ಗುಣಪಡಿಸೋಕೆ...

ಸಹನೆಯೇ ಯಜ್ಞ ಇಲ್ಲಿ
ಕೋಪ ತಾಪಗಳ ಭಸ್ಮ ಮಾಡೋಕೆ,
ಭರವಸೆಯಾ ನಾಳೆಯೊಳಗೂ
ಪ್ರೀತಿ ಹುಡುಕುವ ನಾನು ಒಬ್ಬ ಫಕೀರ...






No comments:

Post a Comment