05 August, 2018

ಆತ್ಮ ಬಂಧ...

ಜೊತೆಗೆ ಇರುವವರೆಗೆ ನೀನು
ಕಾರಣ ಕೇಳಲಿಲ್ಲಾ ನಾನು,
ಬಿಟ್ಟು ಹೋಗುವ ಮುಂಚೆ
ಕಾರಣ ಕೇಳೆನು ನಾನು...

ಇಂದಲ್ಲಾ ನಾಳೆ ನೀನು
ಬಿಟ್ಟು ಹೋಗಲೇಬೇಕು ನನ್ನ,
ಕಾರಣ ತಿಳಿದಿದೆ ನನಗೆ
ಮತ್ತೆ ಹೇಗೆ ತಡೆಯಲಿ ನಿನ್ನಾ...

ಬೇಸರವು ನನಗಿಲ್ಲಾ
ನೀ ಬಿಟ್ಟು ಹೋಗುವೆಯೆಂದೂ,
ನಮ್ಮಿಬ್ಬರ ಅಗಲುವಿಕೆ
ಅನಿವಾರ್ಯ ಈ ಜೀವನಚಕ್ರದಲ್ಲಿ...

ಜೊತೆಗಿರುವವರೆಗೂ ನೀನಾದೆ ಉಸಿರು
ನಾನಾದೆ ನಿನಗಿಲ್ಲಿ ಹೆಸರು,
ನೀನಿಲ್ಲದ ಮೇಲೆ ಲೋಕವೇ ಬರಿದು
ನಾನಾಗುವೆ ಪಂಚಭೂತಗಳ ಶರಣು...

No comments:

Post a Comment