30 August, 2018

ನೆನಪು...

ಖಾಲಿ ಖಾಲಿ ಮನಸೊಳಗೂ
ಪೋಲಿ ಪೋಲಿ ಕನಸುಗಳು,
ಕಣ್ಣ ಮುಚ್ಚಲು ಬಿಡದಂತೆ
ಕಾಡಿ ಓಡಿ ಹೋಗುತಿವೆ...

ಬರಿ ರಾತ್ರಿಯಲ್ಲ ಹಗಲೊಳಗೂ
ಗೆಜ್ಜೆ ಕಟ್ಟಿ ಕುಣಿಯುತಿವೆ,
ಧ್ಯಾನವೀಗ ಮರೆತೋಯ್ತು
ಮನಸಿನ ಮಾತು ಕೂಡ ನಿಂತೋಯ್ತು...

ಓಡಿ ಹೋಗೊ ಕಾಲಕ್ಕೂ
ಕರುಣೆಯೆ ಇಲ್ಲಿ ಕರಗೋಯ್ತು,
ಕೂಗಿ ಕರೆದರೂ ಇಲ್ಲೀಗ
ಕಾಡುವ ನೆನಪುಗಳನ್ಯಾರೂ ತಡೆಯೋರಿಲ್ಲಾ...

ಪ್ರೀತಿಯ ಕೇಳಲು ನಾ ಬಂದೆ
ವಿರಹದ ಉರಿಯಾ ನೀ ಕೊಟ್ಟೆ,
ಕಾಡುವ ಓ ನೆನಪುಗಳೇ
ನಿಮಗೆ ರಜೆಯೂ ಕೂಡ ಇಲ್ಲಿಲ್ವೇ?...

1 comment:

  1. ಮನೋ ವೇದನೆ ವೇದ್ಯವಾಗಿದೆ.

    ReplyDelete