ತನು ಕನ್ನಡ ಮನ ಕನ್ನಡ
ರಕ್ತದ ಕಣ ಕಣವು ಕನ್ನಡ,
ದೇಹದೊಳಗಣ ಉಸಿರು ಮಾತ್ರ
ತಾಯಿ ಭಾರತಿ ನಿನಗರ್ಪಿತ...
ತಾಯಿ ನೀನು ದೈವವಾದೆ
ಓ ಪ್ರೀತಿಯ ಭಾರತಿ,
ನಿನ್ನ ಮಡಿಲಲ್ಲಿ ಜ್ಯೋತಿಯಾಗಿ
ನಿನಗೆ ಬೆಳಗುವೆನಮ್ಮ ಆರತಿ...
ಕೋಟಿ ದೇವರಿಲ್ಲಿ ಇದ್ದರೂನು
ನೀನವರಿಗಿಲ್ಲಿ ಮಾತೆಯೂ,
ದಿನದ ಮೊದಲ ನಮನ
ನಿನಗೆ ಓ ದೇವಿ ಭಾರತಿ...
ನಿತ್ಯ ನಡೆಯುವುದಿಲ್ಲಿ ಪೂಜೆ ನಿನಗೆ
ಮಂತ್ರವದುವೆ ವಂದೇಮಾತರಂ,
ಹಿಮದ ಗಿರಿಯು ಕಿರೀಟ ನಿನಗೆ
ನಮ್ಮ ಕಾಯಲದುವೆ ಕೋಟೆಯೂ...
ಗಂಗೆ ಯಮುನೆ ತುಂಗ ಭದ್ರೆ
ನಿನಗೆ ನಿತ್ಯ ಅಭಿಷೇಕವಗೈವರು,
ಮಲೀನವಾದ ಹೃದಯಗಳಲಿ
ದೇಶ ಭಕ್ತಿಯನ್ನು ತುಂಬಿಸಮ್ಮ ಭಾರತಿ...
ರಕ್ತದ ಕಣ ಕಣವು ಕನ್ನಡ,
ದೇಹದೊಳಗಣ ಉಸಿರು ಮಾತ್ರ
ತಾಯಿ ಭಾರತಿ ನಿನಗರ್ಪಿತ...
ತಾಯಿ ನೀನು ದೈವವಾದೆ
ಓ ಪ್ರೀತಿಯ ಭಾರತಿ,
ನಿನ್ನ ಮಡಿಲಲ್ಲಿ ಜ್ಯೋತಿಯಾಗಿ
ನಿನಗೆ ಬೆಳಗುವೆನಮ್ಮ ಆರತಿ...
ಕೋಟಿ ದೇವರಿಲ್ಲಿ ಇದ್ದರೂನು
ನೀನವರಿಗಿಲ್ಲಿ ಮಾತೆಯೂ,
ದಿನದ ಮೊದಲ ನಮನ
ನಿನಗೆ ಓ ದೇವಿ ಭಾರತಿ...
ನಿತ್ಯ ನಡೆಯುವುದಿಲ್ಲಿ ಪೂಜೆ ನಿನಗೆ
ಮಂತ್ರವದುವೆ ವಂದೇಮಾತರಂ,
ಹಿಮದ ಗಿರಿಯು ಕಿರೀಟ ನಿನಗೆ
ನಮ್ಮ ಕಾಯಲದುವೆ ಕೋಟೆಯೂ...
ಗಂಗೆ ಯಮುನೆ ತುಂಗ ಭದ್ರೆ
ನಿನಗೆ ನಿತ್ಯ ಅಭಿಷೇಕವಗೈವರು,
ಮಲೀನವಾದ ಹೃದಯಗಳಲಿ
ದೇಶ ಭಕ್ತಿಯನ್ನು ತುಂಬಿಸಮ್ಮ ಭಾರತಿ...
ಪದೇ ಪದೇ ಓದಿಕೊಂಡೆ. ಉತ್ತಮ ಉತ್ತಮ.
ReplyDeleteThank u badari sir...
Delete