ಬದುಕಿಲ್ಲಿ ಭರವಸೆಯು
ನಂಬಿಕೆಯ ನೆರಳಿರೋವರೆಗೂ,
ಕನಸಿಲ್ಲಿ ಜೀವಂತ
ಒಲವು ಹಸಿರಾಗಿರೋವರೆಗೂ...
ಭಯವಿಲ್ಲಿ ನೆರಳಾಗಿ ಕಾಡಲು
ನಂಬಿಕೆಯ ದೀಪವಾರುತಿದೆ,
ಆತ್ಮವಿಶ್ವಾಸದ ಪರದೆ ಜಾರುತಿರೆ
ನಾಳೆಗಳು ಮರೀಚಿಕೆಯಾಗುತಿದೆ...
ಸಂಬಂಧಗಳ ಸಂಕೋಲೆಯಿಲ್ಲಿ
ಬಂಧಿಸುವ ಭೀತಿ ಎದುರಾಗಿರಲು,
ಸ್ವಚ್ಚಂದ ಮನಸಿನ ಬಾನು
ಕಾರ್ಮೋಡಗಳ ನೆಲೆಯಾಗಿದೆ...
ಕನಸುಗಳು ಕಾಲಗರ್ಭ ಸೇರುತಿರಲು
ಮನಸೊಳಗೆ ಅಂಧಕಾರ,
ಭೂತ ಭವಿಷ್ಯಗಳು ಕಾಡುತಿರಲು
ಬದುಕಿಲ್ಲಿ ಮರೀಚಿಕೆ...
ನಂಬಿಕೆಯ ನೆರಳಿರೋವರೆಗೂ,
ಕನಸಿಲ್ಲಿ ಜೀವಂತ
ಒಲವು ಹಸಿರಾಗಿರೋವರೆಗೂ...
ಭಯವಿಲ್ಲಿ ನೆರಳಾಗಿ ಕಾಡಲು
ನಂಬಿಕೆಯ ದೀಪವಾರುತಿದೆ,
ಆತ್ಮವಿಶ್ವಾಸದ ಪರದೆ ಜಾರುತಿರೆ
ನಾಳೆಗಳು ಮರೀಚಿಕೆಯಾಗುತಿದೆ...
ಸಂಬಂಧಗಳ ಸಂಕೋಲೆಯಿಲ್ಲಿ
ಬಂಧಿಸುವ ಭೀತಿ ಎದುರಾಗಿರಲು,
ಸ್ವಚ್ಚಂದ ಮನಸಿನ ಬಾನು
ಕಾರ್ಮೋಡಗಳ ನೆಲೆಯಾಗಿದೆ...
ಕನಸುಗಳು ಕಾಲಗರ್ಭ ಸೇರುತಿರಲು
ಮನಸೊಳಗೆ ಅಂಧಕಾರ,
ಭೂತ ಭವಿಷ್ಯಗಳು ಕಾಡುತಿರಲು
ಬದುಕಿಲ್ಲಿ ಮರೀಚಿಕೆ...
No comments:
Post a Comment