12 August, 2018

ಅಪ್ಪಾ...


ಬದುಕು ಕಲಿಸಿದ ಕಲಾವಿದ
ಜೀವನದ ನಿಜವಾದ ನಾಯಕ,
ಬದುಕಲಿ ಪಡೆದ ಮೊದಲ ಸ್ನೇಹಿತ
ನನ್ನ ಕನಸುಗಳ ಚೌಕಿದಾರ...

ಪ್ರೀತಿಲಿ ನೀನು ಹೃದಯವಂತ
ತಪ್ಪಿಗೆ ನೀನೇ ದಂಡನಾಯಕ,
ನೋವಲ್ಲೂ ನಗುವ ಧೀಮಂತ
ಕಣ್ಣೀರನೂ ಕರಗಿಸೋ ಜಾದುಗಾರ...

ಸ್ವಾರ್ಥವ ಮರೆತ ಗುಣವಂತ
ಸ್ವಾಭಿಮಾನವ ಮೆರೆವ ಶ್ರೀಮಂತ,
ನ್ಯಾಯಕ್ಕೆ ನೀನೇ ಅರಕ್ಷಕ
ಅಗಣಿತ ಗುಣಗಳ ಸಾಗರ...

ನೀನು ಸೃಷ್ಟಿಯ ಸುಂದರ ಕೌತುಕ
ನೀನು ಆ ದೇವರಾ ಮಗ,
ಸವೆಸುವೆ ಜೀವವ ಸಂಬಂಧಗಳಿಗಾಗೆ
ಆದರೂ ನೀನು ಶಾಪಗ್ರಸ್ಥ ಗಂಧರ್ವ...


2 comments: