21 September, 2018

ಜೀವನ ಚಕ್ರ....

ಮುದ್ದು ಮನಸೇ ಓ ಪೆದ್ದು ಮನಸೇ
ನಗುನಗುತಾ ನೀ ಸಾಗು ಮನಸೇ,
ಹುಟ್ಟಿನರಮನೆಯಿಂದ ಸಾವಿನ ಮೆರವಣಿಗೆವರೆಗೂ
ನಗುತಾ ಸಾಗಬೇಕು ನೀ ಹುಚ್ಚು ಮನಸೇ...

ನಿನ್ನೆ ಯಾರೋ ಇಂದು ಇನ್ಯಾರೋ
ನಾಳೆಯೆಂಬುದು ನೀನೇ ಆಗಿರಬಹುದು,
ಹುಟ್ಟು ಮಾತ್ರ ಸ್ವಂತ ಇಲ್ಲಿ
ಸಾವಿಗ್ಯಾರೂ ಹೊಣೆ ಇಲ್ಲಾ ಇಲ್ಲಿ...

ಹೋಗೊ ಮುಂಚೆ ಹೇಳೊರು ಇಲ್ಲಾ
ಹೋಗೊವಾಗ ತಡೆಯೋರು ಇಲ್ಲಾ,
ಇಂದು ಇಲ್ಲಿ ಎಲ್ಲಾರೂ ಜೊತೆಗಿರೆ
ನಗುನಗುತಾ ಕೂಡು ಮನಸೇ...

ಬದುಕಿನಲ್ಲಿ ಭವಣೆ ತಪ್ಪದೂ ಎಂದೂ
ಸಾವೆಂಬ ಸತ್ಯ ಸುಳ್ಳಾಗದಿಲ್ಲಿ,
ಜೀವನ ಚಕ್ರ ಸಾಗುತಿರಲು ಇಲ್ಲಿ
ಸಾವೆಂಬ ಮಿತ್ರ ಕರೆಯದೇ ಬರುವನಿಲ್ಲಿ...

ನಗುನಗುತಾ ಬಾಳಬೇಕು ಮನಸೇ ನೀನಿಲ್ಲಿ
ಜೀವನ ಸತ್ಯ ಕಹಿಯೂ ಎಂದೂ,
ನಗುವೇ ಶಕ್ತಿ ಈ ಬದುಕಿಗಿಲ್ಲಿ
ನೋವನು ಮರೆಸೋ ಶಾಂತಿಗೀತೆಯಿಲ್ಲಿ...

No comments:

Post a Comment