14 October, 2018

ಗುಬ್ಬಿ ಗೂಡು...

ಗುಬ್ಬಚ್ಚಿ ಗೂಡು ಮನಸಿಲ್ಲಿ
ಓ ಪ್ರೀತಿ ನಿನ್ನ ಕನವರಿಕೇಲಿ,
ಕನಸಿನ ಮಾತು ಹೆಚ್ಚಾಯ್ತು
ನೂರು ಹಾಳು ನೆನಪಲ್ಲಿ...

ಚಿಟಪಟ ಕೂಗೋ ಮನಸಿಲ್ಲಿ
ಭಾವದ ರೆಕ್ಕೆ ಬಿಚ್ಚಿದೆ,
ಬದುಕಿನ ಅಂಗಳದ ತುಂಬೆಲ್ಲಾ
ಕನಸಿನ ಕಾಳು ಹೆಕ್ಕುತಿದೆ..

ಚಿಲಿಪಿಲಿ ಸದ್ದನು ಮಾಡುತ್ತಾ
ಮನಸಿನ ಗುಬ್ಬಿ ಹೊರಟಾಯ್ತು,
ಪ್ರೀತಿಯ ಸವಿನೆನಪಲ್ಲಿ
ಗೂಡನು ಬಿಟ್ಟು ಆಗಸ ಸೇರಾಯ್ತು...

ಪ್ರೀತಿಯ ಕನವರಿಕೇಲಿ
ಗುಬ್ಬಿಗೂಡು ಈಗ ಪ್ರೇಮಲೋಕ,
ಕನವರಿಸೋ ಹೃದಯಕ್ಕೆ
ಪ್ರೀತಿಯೇ ಇಲ್ಲಿ ಜಗವೀಗ...

No comments:

Post a Comment