28 October, 2018

ರಾಕ್ಷಸ...

ಕಣ್ಣ ಹನಿಗಳು ಬತ್ತಿ ಹೋಗಿವೆ
ಹೃದಯವೇ ನಿನ್ನ ಕೂಗಿಗೆ,
ರಕ್ತವು ಕೂಡ ಆವಿಯಾಗಿದೆ
ಮನಸೇ ನಿನ್ನ ಕುದಿಯುವಿಕೆಗೆ...

ಜೀವನ ನಡೆದಿದೆ ತಣ್ಣಗೆ
ಓ ವಿಧಿಯೇ ನಿನ್ನಯ ಆಟದಲಿ,
ಸಾವು ಕೂಡ ಮುಗುಳುನಗೆ ಬೀರಿದೆ
ಬದುಕೇ ನಿನ್ನ ಸಾಹಸಕೆ...

ಒಲವೇ ನೀನಿಲ್ಲಿ ಸುಮ್ಮನೆ
ಈ ಒಂಟಿ ಪಯಣದಲಿ,
ಸತ್ಯ ಧರ್ಮದಾ ಬೆಳಕಿಲ್ಲಾ
ಬೆತ್ತಲೆಯಾ ಜಗದೊಳಗೆ...

ನಾಳೆಗಳೊಳಗೆ ನಾನಿಲ್ಲಾ
ಕೇಳಿರಿ ಓ ಕನಸುಗಳೇ,
ಸಾವೆಂಬ ಸೂತಕದ ಭಯವೂ ಕಾಡಿಲ್ಲ
ಮನಸಿಲ್ಲಿ ಸತ್ಯಕ್ಕೆ ಹತ್ತಿರ ಇರೋವಾಗ...

ಕಣ್ಣೀರಿನ್ನೂ ಉಕ್ಕಲ್ಲಾ
ಬದುಕಿನ ಒಂಟಿ ಪಯಣದಲಿ,
ಕ್ಷಮಿಸೂ ಒಲವೇ ಮನಸಿಲ್ಲಿ ಕೆರಳಿದರೆ
ನಾನಿಲ್ಲಿ ನರ ರಾಕ್ಷಸ...

No comments:

Post a Comment