07 October, 2018

ಓ ಕನಸುಗಳೇ...

ವಾಮನ ನಾನು ಓ ಕನಸುಗಳೇ
ತ್ರಿವಿಕ್ರಮರಾಗದಿರಿ ನೀವಿಲ್ಲಿ,
ಮನಸಿನ ಮಾತು ಹೃದಯವ ಸೇರುವ ಮುನ್ನ
ಒಮ್ಮೆ ನಿಂತು ಕೇಳಿ ನೀವಿಲ್ಲಿ...

ಮನಸಿಂದ ಮನಸೊಳಗೇ ಜನಿಸಿದರೂ
ಹಾರಿ ಹೋಗದಿರಿ ಆಗಸಕೆ,
ಹೃದಯವ ತಲುಪುವ ಮುನ್ನ ಜಾರದಿರಿ
ಅಕ್ರಮವಾದೀತು ಓ ಕನಸುಗಳೇ...

ಬದುಕಿನ ಬುತ್ತಿಯ ಒಳಗೆ
ನೀವಿಲ್ಲಿ ಪ್ರೀತಿಯ ತುತ್ತುಗಳು,
ಬದುಕಿನ ಮುನ್ನುಡಿ ನೀವೇ
ಕರಗದಿರಿ ನಂದಾದೀಪವಾಗುವ ಮುನ್ನ...

ಮನಸಿನ ಮಾತು ನೀವು
ಹೃದಯದ ದನಿಗೆ ಕಿವಿಯಾಗಿ,
ಮನಸಿನ ಕದವ ತೆರೆಯೋ ಮುಂಚೆ
ಹೃದಯದ ಮಿಡಿತಕೆ ತಲೆಬಾಗಿ...

No comments:

Post a Comment