ಮೋಡದ ಮರೆಯಲಿ ಆಡುವ ಚಂದಿರ
ನಿನ್ನಾ ಆಟ ನನಗಿಷ್ಟ,
ಬದುಕಲಿ ನೋವಿನ ಜೊತೆಯಲಿ ಹಾಗೆ
ಆಡುವುದಿಲ್ಲಿ ಬಲು ಕಷ್ಟ...
ನಿನ್ನಯ ಹುಣ್ಣಿಮೆ ಬೆಳದಿಂಗಳು
ಭೂಮಿಗೆ ಇಲ್ಲಿ ಬಲು ತಂಪು,
ಬಾಳಿನ ಪಯಣದಿ ಬರುವಾ ನಲಿವವು
ಹೃದಯಕ್ಕಿಲ್ಲಿ ಬಲು ಇಂಪು...
ಓಡಿ ದೂರ ಹೋಗುವವಲ್ಲಿ
ನಿನ್ನಾ ಜೊತೆಗಿಹ ಮೋಡಗಳು,
ಬಂದರೆ ಜೊತೆಯ ಬಿಡುವುದೆಯಿಲ್ಲಾ
ನನ್ನೀ ಚಿಂತೆಯ ಮೋಡಗಳು...
ಮೋಡಗಳ ಜೊತೆಗೆ ನಿನ್ನದು ಎಂದೂ
ಕಣ್ಣ ಮುಚ್ಚಾಲೆಯ ತುಂಟಾಟ,
ನೋವು ನಲಿವುಗಳ ಬದುಕಲ್ಲಿ
ನನ್ನದು ದಿನವೂ ಜೂಟಾಟ...
ಆದರೂ ನಮ್ಮಿಬ್ಬರದೂ ಒಂದೇ ಪಾಡು
ಒಂದೇ ಒಂದು ವಿಷಯದಲಿ,
ನೀನು ಉಬ್ಬುವೆ ನೀನು ಕುಗ್ಗುವೆ
ನನ್ನಯ ಹಾಗೆ ಕಾಲದ ಓಟದಲಿ...
ನಿನ್ನಾ ಆಟ ನನಗಿಷ್ಟ,
ಬದುಕಲಿ ನೋವಿನ ಜೊತೆಯಲಿ ಹಾಗೆ
ಆಡುವುದಿಲ್ಲಿ ಬಲು ಕಷ್ಟ...
ನಿನ್ನಯ ಹುಣ್ಣಿಮೆ ಬೆಳದಿಂಗಳು
ಭೂಮಿಗೆ ಇಲ್ಲಿ ಬಲು ತಂಪು,
ಬಾಳಿನ ಪಯಣದಿ ಬರುವಾ ನಲಿವವು
ಹೃದಯಕ್ಕಿಲ್ಲಿ ಬಲು ಇಂಪು...
ಓಡಿ ದೂರ ಹೋಗುವವಲ್ಲಿ
ನಿನ್ನಾ ಜೊತೆಗಿಹ ಮೋಡಗಳು,
ಬಂದರೆ ಜೊತೆಯ ಬಿಡುವುದೆಯಿಲ್ಲಾ
ನನ್ನೀ ಚಿಂತೆಯ ಮೋಡಗಳು...
ಮೋಡಗಳ ಜೊತೆಗೆ ನಿನ್ನದು ಎಂದೂ
ಕಣ್ಣ ಮುಚ್ಚಾಲೆಯ ತುಂಟಾಟ,
ನೋವು ನಲಿವುಗಳ ಬದುಕಲ್ಲಿ
ನನ್ನದು ದಿನವೂ ಜೂಟಾಟ...
ಆದರೂ ನಮ್ಮಿಬ್ಬರದೂ ಒಂದೇ ಪಾಡು
ಒಂದೇ ಒಂದು ವಿಷಯದಲಿ,
ನೀನು ಉಬ್ಬುವೆ ನೀನು ಕುಗ್ಗುವೆ
ನನ್ನಯ ಹಾಗೆ ಕಾಲದ ಓಟದಲಿ...
No comments:
Post a Comment