14 July, 2019

ಬದುಕಿನ ಪುಸ್ತಕ...

ಬದುಕಿನ ಪುಸ್ತಕ ತೆರೆದಾಗ
ಪ್ರೀತಿಯ ಪುಟವೇ ಹರಿದಿತ್ತು,
ಹುಡುಕಲು ನಾನು ಹೊರಟಾಗ
ಬರೆಯದೆ ಉಳಿದ ಮಾತುಗಳಲ್ಲಿ ತಡೆದಿದ್ವು...

ಸ್ನೇಹದ ಪುಟಗಳ ನಾ ತೆರೆದಿದ್ದೆ
ನೆನಪುಗಳಲ್ಲಿ ಅರಳಿದ್ವು,
ಮುಂದಿನ ಪುಟವ ಹೊರಳಿಸಲು
ಮನಸ್ಯಾಕೋ ಅಲ್ಲೇ ನಿಂತಿತ್ತು...

ಮನಸು ಸುಮ್ಮನೆ ನಗುತಿತ್ತು
ಅದರೆ ಒಳಗೊಳಗೆ ಅಲ್ಲಿ ಅಳುವಿತ್ತು,
ಸಂಬಂಧಗಳ ಪುಟವಾ ನಾ ತಿರುವಿದ್ದೆ
ಅಲ್ಲೆಕೋ ಜಾಗ ಇನ್ನೂ ಖಾಲಿ ಉಳಿದಿತ್ತು...

ಮುಂದಿನ ಪುಟವ ಓದಲು ನಾ
ಮನಸಲಿ ಯಾಕೋ ಅಳುಕಿತ್ತು,
ನಂಬಿಕೆಯಾ ಹಾಳೆಯಲ್ಲಿ ಕಿತ್ತೋಗಿತ್ತು
ನನಗರಿಯದೆ ಕಣ್ಣೀರಲ್ಲಿ ಜಾರಿತ್ತು...

ಖುಷಿಯಾ ಹಾಳೆಯಾ ಮನ ಹುಡುಕಿತ್ತು
ಪುಸ್ತಕ ಮುಗಿದರು ಅದು ಸಿಗಲಿಲ್ಲಾ,
ಬರೆಯದೆ ಉಳಿದಾ ಪುಟದೊಳಗೆ
ಖುಷಿಯೂ ಹಾಗೆ ಉಳಿದಿತ್ತು...

No comments:

Post a Comment