25 October, 2019

ಯಾತ್ರೆ...

ಬದುಕೇ ಇಲ್ಲಿ ಮೌನ
ಮನಸೇ ನೀನು ಕನಸ ಮರೆತರೆ,
ಬದುಕು ಇಲ್ಲಿ ಮಹಾಕಾವ್ಯ
ಮನಸೇ ನೀನಿಲ್ಲಿ ಬೆರೆತು ನಡೆದರೆ...

ಬದುಕಿಲ್ಲಿ ಕಾಲದ ಜೊತೆಗಿನ ಓಟ
ಕನಸೇ ಅದಕ್ಕಿಲ್ಲಿ ಊಟ,
ಭರವಸೆಯೇ ದಾರಿದೀಪ
ನಡೆಯಬೇಕಷ್ಟೇ ನೀನಿಲ್ಲಿ ದೂರ...

ಭಾವಯಾನವಿದು ಬದುಕು
ಒಂಟಿಯಿಲ್ಲಿ ಪ್ರತಿಯೊಬ್ಬರೂ,
ಹುಟ್ಟು ಸಾವಿನ ನಿಲ್ದಾಣಗಳ ನಡುವೆ
ಸಿಗುವವರೆಲ್ಲ ನಮ್ಮವರೆಂಬ ಭ್ರಮೆಯಷ್ಟೇ...

ಮನಸೇ ನೀನು ನಗುತಿರು ಇಲ್ಲಿ
ನಿನ್ನಯ ಕನಸಿನ ಲೋಕದಲ್ಲಿ,
ಭಾವ ಸಾಗರದಲ್ಲಿ ಹೊಳೆಯುವ ಮುತ್ತಾಗಿ
ನಲಿಯುತಿರು ನೀ ಜೀವನ ಯಾತ್ರೆಯಲಿ...

No comments:

Post a Comment