ಜಗವ ಕಾಯುವಾ ದೇವನಿಗೂ
ತಪ್ಪಲಿಲ್ಲಾ ಲೋಕ ನಿಂದನೆ,
ಹುಟ್ಟಿ ಸಾಯುವ ಓ ಜೀವವೇ
ನಿನಗೆ ತಪ್ಪೀತೆ ಇಲ್ಲಿ ವಿಡಂಭನೆ...
ಜಗವು ತೋರದು ನಿನಗೆ ದಾರಿಯಾ
ತೂರಬಹುದು ಬರಿ ಮಾತಿನ ಬಾಣವ,
ನಡೆದು ತೋರಿಸೆ ನಿನ್ನದೇ ದಾರಿಯ
ಜಗವೇ ತಿರುಗಿ ನೊಡುವುದು ನಿನ್ನಯಾ...
ಹತ್ತಿ ನಿಲ್ಲು ಅವಮಾನಗಳ ಮೆಟ್ಟಿಲು
ಹೊತ್ತು ತಿರುಗುವುದು ಅವಕಾಶಗಳ ತೊಟ್ಟಿಲು,
ಎಡವಿ ಬೀಳದಿರು ಯಶಸ್ಸಿನ ಹೊಸ್ತಿಲು
ಜಗವು ನಗಲು ಸಾಕದುವೆ ಕಾರಣವೂ...
ನಿಂದಿಸಿ ಬೆಳೆದವರಿಲ್ಲಾ ಜಗದಲಿ
ನಿಂದನೆಯ ಸಹಿಸಿ ಬೆಳೆದವರೆ ಇಲ್ಲಿ,
ಹಸಿವು ಅವಮಾನಗಳೇ ಗುರುವು ಇಲ್ಲಿ
ತಲೆ ಎತ್ತಿ ನಡೆಯಲು ಬದುಕಲಿ...
ತಪ್ಪಲಿಲ್ಲಾ ಲೋಕ ನಿಂದನೆ,
ಹುಟ್ಟಿ ಸಾಯುವ ಓ ಜೀವವೇ
ನಿನಗೆ ತಪ್ಪೀತೆ ಇಲ್ಲಿ ವಿಡಂಭನೆ...
ಜಗವು ತೋರದು ನಿನಗೆ ದಾರಿಯಾ
ತೂರಬಹುದು ಬರಿ ಮಾತಿನ ಬಾಣವ,
ನಡೆದು ತೋರಿಸೆ ನಿನ್ನದೇ ದಾರಿಯ
ಜಗವೇ ತಿರುಗಿ ನೊಡುವುದು ನಿನ್ನಯಾ...
ಹತ್ತಿ ನಿಲ್ಲು ಅವಮಾನಗಳ ಮೆಟ್ಟಿಲು
ಹೊತ್ತು ತಿರುಗುವುದು ಅವಕಾಶಗಳ ತೊಟ್ಟಿಲು,
ಎಡವಿ ಬೀಳದಿರು ಯಶಸ್ಸಿನ ಹೊಸ್ತಿಲು
ಜಗವು ನಗಲು ಸಾಕದುವೆ ಕಾರಣವೂ...
ನಿಂದಿಸಿ ಬೆಳೆದವರಿಲ್ಲಾ ಜಗದಲಿ
ನಿಂದನೆಯ ಸಹಿಸಿ ಬೆಳೆದವರೆ ಇಲ್ಲಿ,
ಹಸಿವು ಅವಮಾನಗಳೇ ಗುರುವು ಇಲ್ಲಿ
ತಲೆ ಎತ್ತಿ ನಡೆಯಲು ಬದುಕಲಿ...
No comments:
Post a Comment