15 March, 2020

ಹೂವು...

ಬಾಳಬೇಕು ಬದುಕ ಇಲ್ಲಿ ಹೂವಿನ ತರಹ
ನೋವು ಇಲ್ಲ ಅಲ್ಲಿ ನಗುವು ಮಾತ್ರ ಇಲ್ಲಿ,
ದೇವರ ಮುಡಿಗೂ ಸ್ಮಶಾನದ ಹೆಣಕೋ
ದಿನದ ಬದುಕ ನೆನೆದು ಕೊರಗೂ ಇಲ್ಲ ಇಲ್ಲಿ...

ಮೇಲು ಕೀಳು ಇಲ್ಲಾ ಇಲ್ಲಿ
ಸುವಾಸನೆಯ ಹಂಗಂತೂ ಮೊದಲೇ ಇಲ್ಲಾ,
ಅರಳಿ ನಗುವುದಷ್ಟೇ ಕೆಲಸ
ದಿನದ ಕಡೆಯವರೆಗೂ ಇಲ್ಲಾ ಇಲ್ಲಿ ಚಿಂತೆ...

ಅಂದ ಚಂದಕಿಲ್ಲಿ ಜಂಭವೇನು ಇಲ್ಲಾ
ಮುದ್ದಾದ ನಗುವ ತುಂಬಾ ಕನಸುಗಳೇ ಇಲ್ಲಿ,
ನೂರಾರು ಬಣ್ಣ ಬಿನ್ನಾಣವಿದ್ದರೂನು
ಅಹಂಮ್ಮಿನ ಕೇಕೇಯಂತೂ ಇಲ್ಲಾ...

ಮೊಗ್ಗಾಗಿ ಮೂಡಿ ಹೂವಾಗಿ ಅರಳಿ
ಬಾಡಿ ಉದುರಿ ಹೋದರೂ ಇಲ್ಲಿ,
ಬರೀಯ ಪ್ರೀತಿಯ ಹಂಚಿ ನಗುತಾ
ಬಾಳೋದಷ್ಟೇ ಬದುಕು ಇಲ್ಲಿ...

No comments:

Post a Comment