26 March, 2020

ಆತ್ಮ ಮಂಥನ...

ಮಂದಿರ ಮಸೀದಿ ಚರ್ಚುಗಳು
ಬಾಗಿಲು ನಿನಗೆ ಮುಚ್ಚಿದವೋ,
ಈಗಲಾದರೂ ಮನಸಿನ ಬಾಗಿಲು ತೆರೆ
ಈಶ್ವರ ಅಲ್ಲಾ ಯೇಸು ಅಲ್ಲಿ ನಿಂತಿಹರಲ್ಲೋ...

ಭುವಿಯೆಂಬ ಸ್ವರ್ಗವ ಮರೆಮಾಚಿ
ಮೇಲಿನ ಸ್ವರ್ಗವ ನೀ ಹುಡುಕುತಿರೆ,
ನಿನ್ನಯ ರೂಪದೆ ನಿಂತಿಹನು
ನೀನು ನಂಬಿರುವಾ ಆ ಭಗವಂತ...

ಕಾಲದ ಈ ಓಟದಲಿ
ನೀನೀಗ ಇಲ್ಲಿ ಬಂಧಿಯೂ,
ಅರಿತು ನೀನೀಗ ನಡೆದರೆ
ನಾಳೆಯ ದಾರಿ ಕಾಣುವುದು...

ಅಹಂಕಾರಕೇ ಇಲ್ಲಿ ನೀನೇ ನೀರು ಕುಡಿ
ಬೇರೆ ಔಷದಿ ಇಲ್ಲಿ ಇಲ್ಲಾ ನೋಡು,
ನಾಳೆಯ ಬೆಳಗು ನೀ ನೋಡಲು
ಅಹಮ್ಮಿನ ಪೊರೆಯಾ ಸರಿಸಿ ಬಿಡು...

ಕಾಲವ ಕೆಣಕುತ ನೀ ನಡೆದರೆ
ಕಾಲನೇ ಉತ್ತರಿಸುವಾ ನೋಡು ಬಾ,
ಪ್ರಕೃತಿಯಾ ನೀ ಅವಮಾನಿಸಿ
ಬದುಕೋದೆಲ್ಲೋ ಓ ಮನುಜಾ...

No comments:

Post a Comment