08 April, 2020

ಮೆರವಣಿಗೆ...

ಬದುಕಿನ ಪಯಣದಲಿ ನೆನಪುಗಳೇ ಸಾಗರ
ಮತ್ತೆ ಮತ್ತೆ ಅಪ್ಪಳಿಸುವಾ ಭೋರ್ಗರೆವ ತೆರೆಗಳಂತೆ,
ಮರೆತರೂ ಮರೆಯದ ಮಾಣಿಕ್ಯದ ಗಣಿಯದು
ಕೊರೆದಷ್ಟು ಕೊನೆಯಿರದ ಹೊಳೆಯುವಾ ವಜ್ರಗಳು...

ನಿದ್ದೆಯಾ ಮರೆಸುವವು ನೋವಿನಾ ಕ್ಷಣಗಳು
ನಲಿವಾಗಿ ಮೆರೆಸುವವು ಖುಷಿಯಾ ನೆನಪುಗಳು,
ಕಾಲದ ಮಡಿಲಲ್ಲಿ ಪವಡಿಸಿವೆ ಮುದ್ದು ಮುದ್ದಾಗಿ
ಅವು ಎಚ್ಚೆತ್ತಾಲಾಗೆಲ್ಲ ಕಚಗುಳಿಯೇ ಬದುಕಲ್ಲಿ...

ಮೆರೆಸುವಾ ಕಾಲವೇ ಇಲ್ಲಿ ಎಲ್ಲವಾ ಮರೆಸಿಹುದು
ಮೈ ಮರೆತಾಗಳೆಲ್ಲಾ ಮಗುವಂತೆ ತಟ್ಟಿ ಎಬ್ಬಿಸುತ್ತಾ,
ನೋವಿನಾ ನೆನಪುಗಳಿಗೂ ನಗುವಿಲ್ಲಿ ಇಣುಕುವುದು
ನಲಿವಿನಾ ಕ್ಷಣಗಳಿಗೆ ಕಣ್ಣಂಚಲಿ ನೀರು ಜಿಣುಗುವುದು...

ಸರಿ ತಪ್ಪುಗಳ ದ್ವಂದ್ವಗಳು ಮುಗಿಯೋದಿಲ್ಲ ಬದುಕಲ್ಲಿ
ನೆನಪಿನಾ ಮೆಲುಕುಗಳ ಮರೆಯೋದಿಲ್ಲ ಬಾಳಿಲ್ಲಿ,
ನೋವೆಂದೂ ಹೋರಾಟ ಗೆಲುವಿಲ್ಲಿ ಹಬ್ಬದೂಟ
ನೆನಪುಗಳ ಮೆರವಣಿಗೆ ಇಲ್ಲಿ ನಾವೆಲ್ಲಾ ಚುಕ್ಕಿ ಚಂದ್ರಮ...

No comments:

Post a Comment