29 April, 2020

ಹೊರೆ...

ಖಾಲಿ ಮನಸಿನ ತುಂಬಾ
ಇಲ್ಲಿ ಕನಸು ಹುಟ್ಟಲ್ಲಾ,
ಮನಸಿನ ತುಮುಲಗಳೆಲ್ಲಾ
ಹಾಡಿನ ಸಾಲು ಆಗಲ್ಲಾ...

ಬದುಕು ಇಲ್ಲಿ ಸಾಗಬೇಕು
ಚಿಂತೆಯಾ ಸಂತೆ ಮೇಲೆನೇ,
ಕಂಡರೂ ಕಾಣದ ಕನಸಿನ
ಮಾಯಾ ಲೋಕದಂತೆಯೇ...

ಕಣ್ಣ ಮುಚ್ಚಿ ನಡೆಯೋದ
ಮರೆತು ಬಿಡಲೇಬೇಕಿಲ್ಲಿ,
ಬದುಕಿನ ಬಂಡಿ ಓಡುತಲಿರಬೇಕು
ಕೃಷ್ಣ ಶುಕ್ಲ ಪಕ್ಷದ ರೀತಿಲಿ...

ಬದುಕಿನ ಭಾರವ ಕಳೆಯಬೇಕು
ಆಸೆಯೇ ನೀನಿಲ್ಲಿ,
ಮನಸಿನ ಭಾರವ ಹೊರಲೇಬೇಕು
ನಗುವೇ ನೀನಿಲ್ಲಿ...

No comments:

Post a Comment