10 May, 2020

ಕಲೆ...

ವಿಧಿಯು ಗೀಚಿದ ರೇಖೆಗಳ
ಕಲೆಯಾಗಿಸಬೇಕಿದೆ ಬದುಕಲಿ,
ನಮ್ಮದೇ ಬಣ್ಣಗಳ ಬಳಿದು
ಪ್ರಯತ್ನವೆಂಬ ಕುಂಚದಲಿ...

ಕಣ್ಣಿಗೆ ಕಾಣದ ರೇಖೆಗಳ
ಜೋಡಿಸಬೇಕಿದೆ ನಾಜೂಕಿನಲಿ,
ಸುಂದರ ಚಿತ್ರವೊಂದು ಬರಬೇಕಿದೆ
ರೇಖೆಗಳ ಜೊತೆಗಿನ ಆಟದಲಿ...

ಸೋಲು ಗೆಲುವಿನ ಮೆಟ್ಟಿಲುಗಳ
ಬರೆಯಬೇಕಿದೆ ನಾವಿಲ್ಲಿ,
ಕಾಣದ ನಾಳೆಗಳ ಬಯಲೊಳಗೆ
ಬಿತ್ತಬೇಕಿದೆ ಕರ್ಮದ ಬೀಜಗಳ...

ಮಾನ ಸಮ್ಮಾನಗಳ ಪತ್ರಗಳ
ತಯಾರಿಸಬೇಕಿದೆ ನಾವುಗಳೇ,
ಜಗವು ಕೊಡುವ ಬಿರುದುಗಳ
ಚಿತ್ರಿಸಲಾಗದು ಬದುಕಿನ ಪಟದೊಳಗೆ...

ಬದುಕಿನ ಕಲೆಯ ಅರಿತಾಗ
ಸುಂದರವದು ಕಾಣದ ರೇಖೆಗಳು,
ಕಾಣದ ಕಡಲಿಗೆ ಮನ ಹಂಬಲಿಸೇ
ಬದುಕಿನ ಪಟವದು ನೀಲ ಸಾಗರ...

No comments:

Post a Comment