26 May, 2020

ಕರ್ಮ...

ಪಾಪ ಪುಣ್ಯಗಳ ಪಯಣ
ಮನುಜ ನಿನ್ನ ಬದುಕು,
ಕೋಟಿ ಜೀವ ಧಾತುಗಳ ದಾಟಿ
ಆತ್ಮ ತೊಟ್ಟ ಹೊಸ ಅಂಗಿಯಂತೆ...

ಇದು ಪಾಪ ಪುಣ್ಯಗಳ ಗಂಟು
ಇಲ್ಲುಂಟು ಜನ್ಮ ಜನ್ಮಗಳ ನಂಟು,
ಈ ಜಗವು ಕರ್ಮ ಭೂಮಿಯಾಗಿರಲು
ಮನುಜ ನಿನಗಿಲ್ಲಿಹುದು ಕರ್ಮಗಳ ನಂಟು...

ಪಾಪ ಪುಣ್ಯಗಳ ಎಣಿಕೆ
ನಡೆಯುವುದು ಅವನ ಬಳಿಯಂತೆ,
ಕರ್ಮ ಫಲಗಳ ಸಂತೆ
ನಡೆಯುವುದು ಇಲ್ಲೇ ಜಗದ ಮುಂದೆ...

ಸತ್ಕರ್ಮಗಳ ಮಾಡಬೇಕು ಇಲ್ಲಿ
ಬೆನ್ನು ಬಿಡದ ಬೇತಾಳವಿಲ್ಲಿ ಕರ್ಮಫಲವು,
ನಿನ್ನೆಗಳ ಕರ್ಮಗಳಲ್ಲಿ ನಾಳೆಯ ಬದುಕು
ಬಾಳಬೇಕು ಇಲ್ಲಿ ಕರ್ಮಫಲಗಳ ಜೊತೆಗೆ...

No comments:

Post a Comment