ನೂರೊಂದು ನೆನಪುಗಳುಂಟು
ನನ್ನೆದೆಯಾ ಈ ಗೂಡೊಳಗೆ,
ಪ್ರೀತಿಯಾ ಸವಿ ಕನಸುಗಳುಂಟು
ಆ ನೆನಪುಗಳ ಪ್ರತಿ ಪುಟಗಳಲೂ...
ಪ್ರೀತಿನೇ ಇಲ್ಲದೆ ಹೋದರೆ
ಈ ಜೀವಕ್ಕೆಲ್ಲಿ ಬೆಲೆಯುಂಟು,
ಕನಸುಗಳೇ ಇಲ್ಲದೆ ಹೋದರೆ
ಈ ಪ್ರೀತಿಗೆ ಎಲ್ಲಿ ಬೆಲೆಯುಂಟು...
ಹೃದಯದ ಒಳಗೆ ಹುಟ್ಟಿದ ಪ್ರೀತಿಗೆ
ಭೂಮಿಯ ಮೇಲೆ ಕೊನೆಯಿಲ್ಲ,
ಹುಟ್ಟಿದ ಜೀವ ಸತ್ತರೂ ಕೂಡ
ಪ್ರೀತಿಯ ಕಥೆಯೂ ಮುಗಿಯಲ್ಲ...
ಮನಸಿನ ಎಲ್ಲಾ ಭಾವಗಳಿಗೆ
ಪ್ರೀತಿಯ ಜೊತೆಗೆ ನಂಟುಂಟು,
ಭಾವಗಳ ಜೊತೆಗಿನ ಪಯಣದಲಿ
ಬದುಕಿಗೆ ಬಾಂಧವ್ಯದ ಋಣವುಂಟು...
No comments:
Post a Comment