31 August, 2020

ಓ ಹೃದಯ...

ನೂರೆಂಟು ನೋವುಗಳು ನಿನ್ನೊಳಗೆ
ಆದರೂ ಹೇಗೆ ನೀ ನಗುವೆ, 
ಕಣ್ಣೀರಲ್ಲಿ ಚೂರಾದರೂ ನೀನು
ಪ್ರೀತಿಯ ಎಲ್ಲರಿಗೂ ಮೊಗೆದಿಡುವೆ...

ಪುಟ್ಟದೊಂದು ಗೂಡು ನೀನಿಲ್ಲಿ
ಆದರೂ ನೂರಾರು ಭಾವಗಳ ಹೂಗುಚ್ಚ,
ಜಗದ ಎಲ್ಲಾ ಅನುರಾಗಗಳು
ನಿನ್ನಿಂದಲೇ ಜನ್ಮ ಪಡೆದಿವೆಯೆನೋ ಓ ಹೃದಯಾ...

ಪ್ರೀತಿಸುವ ಜೀವಗಳಿಗೆ ನೀನು ಗುಡಿಯಿಲ್ಲಿ
ನಿನ್ನ ಪ್ರತಿ ಬಡಿತವು ಆತ್ಮದ ಸಂಗೀತಾ,
ನಿನ್ನಾ ನೋವುಗಳಿಗಿಲ್ಲಿ ಕಣ್ಣೀರ ಅಭಿಷೇಕ
ನಿನ್ನ ನಲಿವಿಗೆ ಇಲ್ಲಿ ತುಟಿಯಂಚಿನ ಮಂದಹಾಸ...

ಓ ಹೃದಯಾ ನೀನಿಲ್ಲಿ ಪುಟ್ಟ ಕಿನ್ನರ
ಜಗವನ್ನೇ ಬಂಧಿಸಿಹೆ ನಿನ್ನ ಮುಷ್ಟಿಯಲೇ,
ಅದೃಶ್ಯ ಚೈತನ್ಯ ನೀನು ಬದುಕಲ್ಲಿ
ಆತ್ಮಸಖನೂ ನೀನೆಂದೂ ಬಾಳಲ್ಲಿ...

No comments:

Post a Comment