ಬರೆದಂತೆ ಬದುಕು ನಡೆಯಲ್ಲ
ಕಥೆಯಂತೆ ಬದುಕು ಸಾಗಲ್ಲ,
ಬರೆದಿಡುವಂತೆ ಬದುಕಬಹುದಿಲ್ಲಿ
ಕಥೆಯೂ ಆಗಬಹುದು ಬಾಳಿಲ್ಲಿ...
ನೋವು ನಲಿವುಗಳು ಬಾಳ ಕೊನೆಯಲ್ಲ
ಬದುಕಿನ ತಿರುವುಗಳಷ್ಟೇ ನೋವು ನಲಿವುಗಳು,
ಕಷ್ಟ ಸುಖಗಳು ಇಲ್ಲಿ ಶಾಶ್ವತವಲ್ಲ
ಬರೀಯ ಬಾಳಪಯಣದ ಜೊತೆಗಾರರಷ್ಟೇ...
ಪ್ರೀತಿ ಸ್ನೇಹಗಳಿಲ್ಲಿ ಬದುಕು ಅಲ್ಲ
ಬದುಕಿನ ಪರಿಪೂರ್ಣತೆಗೆ ಸಾಕಾರವಷ್ಟೇ,
ಬದುಕು ಇಲ್ಲಿ ಹರಿಯುವ ತೊರೆಯಂತೆ
ಕಾಡುಮೇಡುಗಳ ಇಲ್ಲಿ ಅಲೆಯಬೇಕು...
ಬದುಕು ಇಲ್ಲಿ ಕತ್ತಲು ಬೆಳಕಿನ ಆಟ
ಬೆಳಕಿನಷ್ಟೇ ಅವಶ್ಯಕವಿಲ್ಲಿ ಕತ್ತಲ ಛಾಯೆ,
ಬದುಕು ಇಲ್ಲಿ ಹಾವು ಏಣಿಯ ಆಟ
ಸೋಲು ಗೆಲುವುಗಳೇ ಇಲ್ಲಿ ಜೀವನ ಪಾಠ...
No comments:
Post a Comment