29 September, 2020

ನಾಟಕ ಶಾಲೆ...

ಮರೆವುಗಳ ತೋಟದೊಳಗೆ
ಜೀವನವಿದು ಜೋಕಾಲಿ,
ನೆನಪುಗಳ ಮಾಳಿಗೆಯೊಳಗೆ
ಬದುಕು ಇದು ಕವ್ವಾಲಿ...

ಪ್ರೀತಿಯ ಮಾಯೆಯೊಳು
ಬದುಕು ಇಲ್ಲಿ ಬೃಂದಾವನ,
ಸ್ನೇಹದ ಬಂಧನದೊಳು
ಜೀವನವಿಲ್ಲಿ ನಂದನವನ...

ಆಸೆಗಳ ಪಯಣದೊಳು
ಜೀವನವಿಲ್ಲಿ ಚಾರಣ,
ಕನಸುಗಳು ತುಂಬಿಕೊಂಡು
ಬದುಕು ಇಲ್ಲಿ ಸಿಹಿ ಹೂರಣ...

ಬಣ್ಣದ ಬುಗುರಿ ಇಲ್ಲಿ
ಬದುಕು ಕಾಲದ ಕೈಯೊಳಗೆ,
ಜೀವನವಿದು ನಾಟಕ ಶಾಲೆ
ತೆರೆ ಎಳೆಯಲೇಬೇಕು ಪಾತ್ರಗಳು ಮುಗಿದಂತೆ...

No comments:

Post a Comment