15 October, 2020

ರಾಗ ತಾಳ...

ಒಲವೇ ನೀನು ವಸಂತ ಗೀತೆ
ಬದುಕ ದಾರಿ ಸವೆಸಲು,
ನಿನ್ನ ಪಲ್ಲವಿ ಚರಣದೊಳು
ಬಾಳ ಪಯಣವಿಲ್ಲಿ ಸರಿಗಮಪ...

ನೋವಿಗೊಂದು ರಾಗವೂ
ನಲಿವಿಗೊಂದು ತಾಳವೂ,
ಬದುಕ ಬನದಿ ತುಂಬಿದೆ
ಅನಂತ ರಾಗ ತಾಳಗಳ ಮೇಳವೂ...

ಬದುಕೇ ನಿನ್ನ ಮಡಿಲಲಿ
ಒಲವು ಮೀಟಿದೆ ಮೃದಂಗವಾ,
ಆದಿ ರಾಗವಿಲ್ಲಿ ನೋವು ನಲಿವದು
ಬಾಳ ವೀಣೆ ತಂತಿಯಲ್ಲಿ ಮಿಡಿದಿದೆ...

ಸ್ನೇಹವಿಲ್ಲಿ ಸಾಹಿತ್ಯವೂ 
ಒಲವೇ ನಿನಗದರ ಸಾಂಗತ್ಯವೂ,
ಕಾಲ ನುಡಿಸುವ ಸಂಗೀತಕೆ
ಇಲ್ಲಿ ನವರಸಗಳ ಝೇಂಕಾರವೂ...

No comments:

Post a Comment