29 October, 2020

ಅಂತರಾಳ...

ಕಳೆದು ಹೋದ ಜಾಗದಲ್ಲೇ
ಮತ್ತೆ ಹುಡುಕಲಾರೆ ನಾ ಎಂದಿಗೂ,
ಓ ಮನಸೇ ಕೇಳು
ಪ್ರೀತಿಯಾದರೂ ಸರಿ ಅದು ಸ್ನೇಹವಾದರೂ...

ನಿಂತು ನಾನು ಕಾಯಲಾರೆ
ಮುಂದೆ ಬರುವ ಸಮಯಕೆ,
ನಿಂತ ನೀರಲ್ಲ ಬದುಕು ಇಲ್ಲಿ
ಓಡುತಲಿರಬೇಕು ಕಾಲಚಕ್ರದಿ...

ಕನಸುಗಳ ಮರೆತು ಬಿಡುವೆ
ವರ್ತಮಾನದ ಓಟದಿ,
ನೆನಪುಗಳಿಗೂ ವಿದಾಯ ಹೇಳಿಬಿಡುವೆ
ಧಕ್ಕೆ ಬರುವುದಾದರೆ ಸ್ವಾಭಿಮಾನಕೆ...

ಯುದ್ಧವಲ್ಲ ಬದುಕು ಇಲ್ಲಿ
ಬೆನ್ನು ತೋರಿಸಿ ಓಡಿ ಹೋಗಲು,
ಕಾಲವು ಕಲಿಸಿದೆ ಅನುಭವದ ಪಾಠ
ಎದ್ದು ಎದೆಯುಬ್ಬಿಸಿ ನಿಲ್ಲಲೂ...

No comments:

Post a Comment