28 November, 2020

ಸಂಘರ್ಷ...

ಕರ್ಮಭೂಮಿಯಿದು ಇಳೆಯಿಲ್ಲಿ
ಕರ್ಮಯೋಗಿಗಳಾಗಬೇಕು ನಾವಿಲ್ಲಿ,
ಧರ್ಮ ಭೂಮಿಯಿದು ಈ ಜಗವೂ
ದಾರ್ಶನಿಕರಾಗಬೇಕಿದೆ ನಾವಿಲ್ಲಿ...

ಧರ್ಮ ಅಧರ್ಮಗಳ ಯುದ್ಧವಿದು
ನಮ್ಮ ಬದುಕು ಈ ಭುವಿಯೊಳಗೆ,
ಸತ್ಯ ಅಸತ್ಯಗಳ ಸಂಘರ್ಷವಿದು
ಕಾಲದ ಜೊತೆಗಿನ ನಮ್ಮೀ ಪಯಣವಿದು...

ನ್ಯಾಯ ಅನ್ಯಾಯಗಳ ನಡುವಿನ ಹೋರಾಟ
ಕರ್ಮಗಳ ಜೊತೆಗಿನ ಒಡನಾಟ,
ಸತ್ಯ ಅಸತ್ಯಗಳ ಜೊತೆಗೆ ಜೂಟಾಟ
ಮನದ ಒಳಗಿನ ಈ ಹೊಯ್ದಾಟ...

ಸತ್ಯ ಧರ್ಮಗಳ ಈ ಹಾದಿಯಲಿ
ಅನ್ಯಾಯ ಅನೀತಿಗಳ ಕಂದರವೂ,
ಕರ್ಮಯೋಗದ ಈ ಪಥದೊಳಗೆ
ಎಲ್ಲರೂ ಬಂಧಿಯಿಲ್ಲಿ ಕಾಲದ ಪರಿಧಿಯೊಳು...

No comments:

Post a Comment