ಹೃದಯದಿ ನಾ ಏನು ಗೀಚಲಿ ಹೇಳು
ಮೌನವಿಲ್ಲಿ ಮಾತಾಗಿಹುದಲ್ಲಾ,
ನಿನ್ನ ತುಂಟ ಪ್ರೀತಿಯು ಇಲ್ಲಿ
ಮತ್ತಾಗಿ ನಶೆ ಏರಿಸಿಹುದಲ್ಲಾ...
ಯಾವ ಸಂಬಂಧವ ನಾ ಬೆಸೆಯಲಿ ಈಗ
ಈ ಬಂಧವು ಸ್ನೇಹವಾಗಿರುವಾಗ,
ನಾ ನಿನ್ನ ಪ್ರೇಮಿಯು ಇಲ್ಲಿ
ನೀನೆನಗೆ ಹೃದಯವ ತೆರೆದಾಗಿನಿಂದ...
ಕಾಲ ಉರುಳಿ ನನ್ನೇ ಮರೆತರೂ ಕೂಡ
ನೀನೆನ್ನ ಮನದಲಿ ಕನಸಾಗಿರುವೆ,
ನೀನೆನಗೆ ಬಂಧುವು ಇಲ್ಲಿ
ನಿನ್ನ ಸ್ನೇಹದಲಿ ನಾ ಬಂಧಿಯೂ...
ಬಣ್ಣ ಬಣ್ಣದ ಕನಸುಗಳ ಸರದಾರ
ಪ್ರತಿ ಕನಸಲ್ಲೂ ಮೂಡಿಸುವೆ ಒಲವಿನ ಚಿತ್ತಾರ,
ಸ್ನೇಹದ ಕಡಲು ನಿನ್ನೊಲವು ಬದುಕಲ್ಲಿ
ಆ ಒಲವಿನ ಮಡಿಲಲಿ ನಗುವೆ ನಾನೆಂದೂ...
No comments:
Post a Comment