08 January, 2021

ಒಲವ ಗೀತೆ...


ಒಲವೇ ನೀನಿಲ್ಲಿ ಮಂದಾರವು
ಕನಸ ಕಚಗುಳಿಯೊಳು ಬಂಗಾರವೂ,
ಮೌನದ ಮರೆಯೊಳಗೆ ನೀ ಬೆಳದಿಂಗಳು
ನಗುವಾ ನಯನದೊಳು ನೀ ಚುಕ್ಕಿಯೂ...

ನೀನೊಂದು ರಾಗ ಈ ಎದೆಗೂಡಲಿ
ಕಣ್ಣ್ ಮುಚ್ಚಿ ತೆರೆದಾಗ ಆನಂದವೂ,
ಸಂಗೀತ ಬಾಳೆಲ್ಲಾ ನಿನ್ನ ನೆನಪಲಿ
ಸಾಹಿತ್ಯ ಬದುಕಿಲ್ಲಿ ನಿನ್ನ ಜೊತೆಯಲಿ...

ಓ ಒಲವೇ ನೀನು ಸಂಗಾತಿಯೂ
ಪ್ರತಿಕ್ಷಣದ ಕನವರಿಕೆ ನಿನ್ನ ಸಾಂಗತ್ಯವೂ,
ನೀನಿಲ್ಲಿ ಬಂದು ಜೊತೆಯಾಗಲು
ಬದುಕೆಂಬ ದೋಣಿ ದಡ ಸೇರಿಹುದು...

ಜೀವಕ್ಕೆ ನೀನು ಉಸಿರಂತೆಯೂ
ಪ್ರತಿ ತುಡಿತಕ್ಕೂ ಇಲ್ಲಿ ನೀ ಮಿಡಿತವೂ,
ಬದುಕೆಂಬ ಬಾನಲ್ಲಿ ನೀ ಸೂರ್ಯನೂ
ನರನಾಡಿಗೆಲ್ಲಾ ಚೈತನ್ಯವೂ...

No comments:

Post a Comment