31 January, 2021

ಬದುಕು...

ಎದೆಗೂಡಿನ ದನಿಯೂ ಸಂಗೀತವಿಲ್ಲಿ
ಭಾವನೆಗಳು ಬರೆವ ಸಾಹಿತ್ಯಕೆ,
ಬದುಕೆಂಬುದಿಲ್ಲಿ ಸಂಗೀತ ಶಾಲೆ
ನೋವು ನಲಿವುಗಳ ರಾಗತಾಳದೊಳು...

ಬದುಕು ಇಲ್ಲಿ ನಾಟಕ ಶಾಲೆ
ವಿಧಿಯೂ ಗೀಚಿದ ಕಥೆಯೊಳು,
ಅಭಿನಯಿಸಲೇಬೇಕು ಜಗದ ರಂಗಮಂದಿರದೊಳು
ನಾನು ನೀನೆಂಬ ಹಮ್ಮು ತೊರೆದು...

ಕಾಲವೆಂಬ ಹರಿವ ನೀರೊಳು
ಬದುಕು ಪುಟ್ಟ ಹಾಯಿದೋಣಿ,
ಹುಟ್ಟು ಹಾಕಿದಷ್ಟು ಕಷ್ಟವಿಹುದು
ದೂರ ತೀರವ ಸೇರಲು...

ಬದುಕು ಇಲ್ಲಿ ಚದುರಂಗದಾಟ
ಆಸೆ ಆಕಾಂಕ್ಷೆಗಳ ನಡುವಿನ ಓಟದೊಳು,
ಬಾಂಧವ್ಯಗಳ ಬಂಧನದೊಳಗೆ
ಬದುಕಿದು ಪರಿತಾಪವೂ...

No comments:

Post a Comment