20 April, 2022

ಬದುಕಿನ ಚಿತ್ತಾರ...

ಮರುಳು ಮರುಳು ಮನಸೇ
ನಡೆಸಿಹೆ ಯಾಕೆ ಚಿಂತೆಯಾ ಸಂತೆ,
ಬದುಕು ಬೇಯುವುದು ಇಲ್ಲಿ
ಕಾಣದ ಬೆಂಕಿಯಾ ಚಿತೆಗೆ...

ಒಂದೇ ಒಂದು ಜನ್ಮವಿಹುದು ಇಲ್ಲಿ
ಮನುಜನಾಗೇ ಬದುಕಬೇಕು,
ಕರುಣೆ ಮರೆತು ಹೋದಮೇಲೆ 
ಬದುಕಿನೊಳು ಪ್ರೀತಿ ಮೂಡಬಹುದೇ...

ಭುವಿಯು ಇಲ್ಲಿ ಪಾಠಶಾಲೆ
ನೋವಿನಿಂದ ಕಲಿಯಬೇಕು,
ನಲಿವಿನಿಂದ ಬೆಳೆಯಬೇಕು
ಬೀಗಬೇಕು ಮತ್ತೆ ಬಾಗಬೇಕು ಇಲ್ಲಿ...

ಬದುಕು ಗೀಚಿದ ನೋವಿನ ಗೆರೆಗಳನ್ನು
ಅಳಿಸಬೇಕು ನಗುವಿನಿಂದ,
ನೋವು ನಲಿವಿನ ಚಿತ್ತಾರದಲ್ಲಿ
ಬದುಕು ಅರಳಿ ನಗುತಿರಬೇಕು...

No comments:

Post a Comment