30 April, 2022

ಭಾರ...

ಕನಸುಗಳ ಭಾರ ಹೆಚ್ಚಾಗಿರಲು
ತೇಲಿಬಿಡಿ ಮಾನಸ ಗಂಗೆಯಲಿ,
ನಿರಂತರ ಹರಿವಿಗೆ ಮೈಯೊಡ್ಡಿ
ಹಗುರವಾಗಲಿ ಕವಿತೆಗಳ ಸಾಲಾಗಿ...

ಮನಸಿನ ಭಾರವು ಹೆಚ್ಚಾಗಿರಲು
ದೇಹಕ್ಕೂ ಸ್ವಲ್ಪ ಹೊರಿಸಿಬಿಡಿ,
ದಣಿವಿನ ಕಾರಣಕೇ ಸೋತು
ನಿದ್ದೆಯಲಿ ವಿರಮಿಸಲೀ ಮನಸು...

ಬದುಕಲಿ ಭಾರವು ಹೆಚ್ಚಾಗಿರಲು
ನಗುವಿನ ಕಡಲಲಿ ಮುಳುಗಿಬಿಡಿ,
ನೋವುಗಳೆಲ್ಲಾ ಅಲೆಗಳಾಗಿ ಭೊರ್ಗರೆಯುತ್ತಿರೆ
ತಣಿಯಲಿ ಮನಸು ಮರೆಯಲಿ...

ಭಾರಗಳೆಲ್ಲ ಹೆಚ್ಚಾದರೂ ಕೂಡ
ಬಾಳಿನ ದೋಣಿಯು ತೇಲಲೇಬೇಕು,
ನಗುವಿನ ಕಡಲಿನ ಮಡಿಲಲ್ಲೇ
ದೂರದ ತೀರವ ಸೇರಲೇಬೇಕು...

No comments:

Post a Comment