ಮಾತಿಲ್ಲ ಕಥೆಯಿಲ್ಲಾ
ಮೌನನೇ ಜೊತೆಯಿಲ್ಲಿ,
ಜೊತೆಗಿರಲು ಅನುಬಂಧ
ಬದುಕಿಲ್ಲಿ ಶ್ರೀಮಂತ...
ಪ್ರತಿ ಕ್ಷಣದ ಅನುರಾಗ
ಮರೆಯಲಾಗದ ಈ ಬಂಧ,
ಸಂಬಂಧಗಳ ಸಂತೆಯಲಿ
ಅನಾಥವಾಗಿದೆ ನಗುನಗುತಾ...
ಒಂದಾಗುವಾ ಹಂಬಲವಿಲ್ಲಾ
ಬೇರಾಗುವ ವ್ಯಥೆಯಿಲ್ಲಾ,
ಸ್ನೇಹವೆಂಬ ಹೆಸರಿಲ್ಲಾ
ಪ್ರೀತಿಯೆಂಬ ಹಂಗಿಲ್ಲಾ...
ನಗಬೇಕು ನಾವು ಬದುಕು ಅತ್ತಾಗ
ಅಳಬೇಕು ಖುಷಿಯಲಿ ಬದುಕು ನಕ್ಕಾಗ,
ಬದುಕಿಲ್ಲಿ ನಾವು ಪಡೆದಂತೆ
ಯಾವ ಅನುಬಂಧವೋ ಜೊತೆಯಲ್ಲಿ...
No comments:
Post a Comment