31 May, 2022

ಸಂಭ್ರಮಿಸೋಣ ಬನ್ನಿ...

ಬದುಕು ಇಲ್ಲಿ ಜಾತ್ರೆಯಂತೆ
ಸಂಭ್ರಮಿಸಬೇಕು ಇರುವಷ್ಟು ಹೊತ್ತು,
ಮೂರು ದಿನದ ತೇರು ಇಲ್ಲಿ
ನೂರು ಕಾಲ ನೆನಪುಳಿಯಬೇಕು...

ಬದುಕು ಇಲ್ಲಿ ಹಬ್ಬವಂತೆ
ಮನಸಾರೆ ನಾವು ಆಚರಿಸಬೇಕು,
ಸಿಹಿಯ ಕಹಿಯ ಉಂಡು ಇಲ್ಲಿ
ನಗುವ ಬೀರುತಾ ನಡೆಯಬೇಕು...

ಬದುಕು ಒಂದು ಮಹಾಕಾವ್ಯವಂತೆ
ಸಂಬಂಧಗಳ ಸಂಪುಟಗಳೊಳಗೆ,
ಪ್ರೀತಿ ಸ್ನೇಹದ ಸಾಲು ಹಿಡಿದು
ನಂಬಿಕೆಯಾ ಉಳಿಸಿ ಬೆಳೆಸಬೇಕು...

ಬದುಕು ಒಂದು ಪಯಣವಂತೆ
ಆಸ್ವಾದಿಸಬೇಕು ಒಳಗಣ್ಣ ತೆರೆದು,
ಕಾಲನ ಕರೆಯು ಬರುವವರೆಗೂ
ಖುಷಿಯ ಹಂಚುತಾ ಕಳೆಯಬೇಕು...

No comments:

Post a Comment