05 June, 2022

ಕವಿತೆ...

ಬರೆಯುವ ಪದಗಳಲಿ 
ಪ್ರೀತಿ ತುಂಬಿರಬೇಕು,
ಓದುವವರ ಎದೆಯೊಳಗೆ
ನೇರವಾಗಿ ಇಳಿದು ಉಳಿಯಬೇಕು...

ಕವಿತೆಯ ಸಾಲುಗಳಲಿ
ಸ್ನೇಹದ ಸಿಂಚನವಿರಬೇಕು,
ಮನಸುಗಳ ಮೀಟಿ
ತಂಪು ಸೂಸುವಂತಿರಬೇಕು...

ಕವಿತೆಯ ಸಾಲುಗಳು
ಬಾಂಧವ್ಯವ ಬೆಸೆಯಬೇಕು,
ಸಂಬಂಧಗಳ ಅಲೆಗಳಲಿ
ಸರಿಗಮವ ಮಿಡಿಸಬೇಕು...

ಕವಿತೆಯ ಸಾಲುಗಳಲಿ
ಕನಸುಗಳ ಗೂಡುಕಟ್ಟಿರಬೇಕು,
ಬದುಕಿನಲಿ ಭರವಸೆಯಾ
ಮಿಂಚು ಹರಿಸುವಂತಿರಬೇಕು...

No comments:

Post a Comment