ದಿನ ಬೆಳಗೋ ಸೂರ್ಯನು ಕೂಡ
ಸ್ವಂತವಲ್ಲ ತಿರೊಗೋ ಭೂಮಿಗೆ,
ರಾತ್ರಿ ತಂಪ ಚೆಲ್ಲುವ ಚಂದ್ರನೂ
ನೆಂಟನಲ್ಲ ಚುಕ್ಕಿ ತಾರೆಗೆ...
ಜೊತೆಯಲ್ಲಿರುವ ಬಳಗವೆಲ್ಲಾ
ನೆಂಟರಲ್ಲಾ ಬದುಕ ನಂಟಿಗೆ,
ಸಂಬಂಧಗಳ ಸಂತೆಯೊಳಗೆ
ಪಾಲುದಾರರು ಬರೀಯ ಗಂಟಿಗೆ...
ನಗುನಗುತಾ ಜೊತೆ ಸೇರುವವರೆಲ್ಲಾ
ನಮ್ಮವರಾಗೊದಿಲ್ಲ ಬಾಳಿಗೆ,
ನಗುವಿಗಷ್ಟೇ ಪಾಲುದಾರರು ಇಲ್ಲಿ
ನೋವಿಗ್ಯಾವ ಹೆಗಲು ಇಲ್ಲವೇ...
ಉರಿಯಬೇಕು ಸೂರ್ಯನಂತೆ
ಮರೆತ ಮನಸುಗಳ ಸುಡುವಂತೆ,
ಕರಗಬೇಕು ಚಂದ್ರನಂತೆ
ಪ್ರೀತಿ ಹಂಚಿದ ಮನಸು ತಂಪಾಗುವಂತೆ...
No comments:
Post a Comment