ಸಣ್ಣಪುಟ್ಟ ಖುಷಿಯೊಳಗೆ
ಜೀವ ಇಲ್ಲಿ ನಗಬೇಕು,
ನೋವನ್ನೆಲ್ಲಾ ಬೆಟ್ಟ ಮಾಡಿದ್ರೆ
ಬದುಕು ಬಾಳ ಅಳುತೈತೆ...
ಹಳ್ಳದಲ್ಲಿ ನೀರು ಹರಿಯೋ ತರಹ
ಸಾಗಬೇಕು ಇರುವತನಕ,
ನಿಂತಲ್ಲೇ ನಿಂತು ಬಿಟ್ರೆ ಇಲ್ಲಿ
ರಾಡಿಯಾಗೋದು ಮನಸು ಮಾತ್ರ...
ನಾನು ನನ್ನದು ಎಂಬುದೆಲ್ಲಾ
ರಟ್ಟೆಯೊಳು ಬಲ ಇರುವವರೆಗೆ ಮಾತ್ರ,
ಪ್ರೀತಿ ಸ್ನೇಹ ಇಲ್ಲಿ ಎಲ್ಲಾ
ಭೂಮಿ ಇರುವತನಕ ನಿತ್ಯ...
ಬದುಕು ಇಲ್ಲಿ ವ್ಯಾಕರಣವೂ
ಪ್ರತಿ ಉಸಿರು ಇಲ್ಲಿ ಹೃಸ್ವ ಧೀರ್ಘವಂತೆ,
ಪ್ರತಿಕ್ಷಣವೂ ಇಲ್ಲಿ ಅಲಂಕಾರವೂ
ಉಪಮಾನ ಉಪಮೇಯವನ್ನೇ ಹುಡುಕು...
No comments:
Post a Comment