28 July, 2022

ಬಯಲು ದಾರಿ...

ಓಡುತಾ ಓಡುತಾ
ಬದುಕನು ಹುಡುಕುತಾ,
ಬಸವಳಿದಿದೆ ದೇಹವೂ
ದಣಿವಾಗಿದೆ ಮನಸಿಗೂ...

ಮುಖವಾಡಗಳ ಲೋಕದಿ
ಸತ್ಯವಾ ಹುಡುಕುತಾ,
ಮುಖವಾಡವ ಧರಿಸುತಾ
ದಾರಿಯು ಮರೆತಿದೆ...

ಲೋಕದ ಹೊಗಳಿಕೆ ತೆಗಳಿಕೆ
ಮಾನ ಅಪಮಾನಗಳ ಮರೆಸಿದೇ,
ನಿನ್ನೆಗೂ ನಾಳೆಗೂ ಅಂತರ ತಿಳಿಯದೇ
ಇಂದಿನ ಈ ಕ್ಷಣ ಮನಸು ಮಂಕಾಗಿದೆ...

ಕಾಲವೂ ಸರಿದಿದೆ
ದಾರಿಯೂ ಸವೆದಿದೆ,
ನೆಮ್ಮದಿಯ ಹುಡುಕಾಟದಲಿ
ಬದುಕು ಬಯಲಾಗಿದೆ...

No comments:

Post a Comment