ಆರತಿ ತಾಯಿ ನಿನಗೆ ಭಾರತಿ
ಅಮೃತ ಭಾರತಿಗೆ ಚಂದದಾರತಿ,
ಹಿಮಾಲಯದ ಗಿರಿಶಿಖರಗಳ
ಹಿಮದ ಹನಿಗಳಿಂದ ಆರತಿ...
ಅಭಿಷೇಕವೂ ತಾಯಿ ನಿನಗೆ ಭಾರತಿ
ಗಂಗೆ ಯಮುನೆ ತುಂಗೆ ಕಾವೇರಿಯಿಂದ,
ಮೈದುಂಬಿ ಹರಿವ ತೊರೆಗಳಿಂದ
ಕುಂಭಾಭಿಷೇಕವು ತಾಯಿ ನಿನಗೆ ಭಾರತಿ...
ಧೂಪದಾರತಿ ತಾಯಿ ನಿನಗೆ ಭಾರತಿ
ಶ್ರೀಗಂಧದ ಬೀಡಿನಲ್ಲಿ ಚಂದನದಾರತಿ,
ಮುಗಿಲೆತ್ತರ ಚಾಚಿರುವ ಗಿರಿಕಣಿವೆಗಳಲಿ
ಮುಗಿಲಿನಾರತಿ ತಾಯಿ ನಿನಗೆ ಭಾರತಿ...
ಸಾಗರಗಳನೇ ಮಾಲೆಯಾಗಿ ಧರಿಸಿಹೆ
ನಿನಗೆ ಮಾರುತಗಳ ಆರತಿ ತಾಯಿ ಭಾರತಿ,
ಚಂದದಾರತಿ ತಾಯಿ ನಿನಗೆ ಆನಂದದಾರತಿ
ಅಮೃತ ಭಾರತಿಗಿದೋ ಕನ್ನಡದಾರತಿ...
No comments:
Post a Comment