12 November, 2022

ಪ್ರೀತಿಯೆಂಬ ಮಾಯೆ...

ಪ್ರೀತಿನೇ ಬದುಕಿನಾ ಮೂಲವೂ
ಪ್ರೀತಿನೇ ನಂಬಿಕೆಯಾ ಸಾರವೂ,
ಮಿತವಾದರೆ ಮಾತ್ರ ಹಿತವೂ ಇಲ್ಲಿ
ಅತಿಯಾದರೆ ಮನಸಿಗೆ ನೋವೇನೇ...

ಪ್ರೀತಿನೇ ಬದುಕಿನಾ ರೀತಿಯೂ
ಸ್ನೇಹವೂ ಪ್ರೀತಿಯಾ ಪ್ರತಿರೂಪವೂ,
ಮಿತವಾಗಿರೆ ಬದುಕಿಗೆ ಬಂಧವೂ
ಅತಿಯಾದರೆ ಬಾಳಿಗೆ ಬಂಧನವೂ...

ಪ್ರೀತಿ ಬದುಕಿನ ಅಮೃತವೂ
ಭರವಸೆಗೆ ಒಂದು ದೀವಿಗೆಯೂ,
ಈ ಪ್ರೀತಿ ನಾಳೆಗಳ ನಗುವದು 
ಕೋಟಿ ಕಂಗಳ ಕನಸಲಿ...

ಅರಳಿ ಬಾಡುವ ಹೂವಲೂ
ನಿತ್ಯ ನಗುತಿರೆ ಪ್ರೀತಿಯೂ,
ಸೃಷ್ಟಿಯಾ ಕಣ ಕಣದೊಳು
ಬೆರತ ಸುಂದರ ಮಾಯೆಯೋ...

No comments:

Post a Comment